alex Certify ಗುಂಗುರು ಕೂದಲಿನಿಂದಲೇ ಫ್ಯಾಷನ್ ಡಿಸೈನರ್ ದಾಖಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಂಗುರು ಕೂದಲಿನಿಂದಲೇ ಫ್ಯಾಷನ್ ಡಿಸೈನರ್ ದಾಖಲೆ….!

ಅಮೆರಿಕದ ಫ್ಯಾಶನ್​ ಡಿಸೈನರ್​ ಸಿಮೋನೆ ವಿಲಿಯಮ್ಸ್​ ಮಹಿಳಾ ವಿಭಾಗದಲ್ಲಿ ಅತಿ ದೊಡ್ಡ ಆಫ್ರೋ ಹೊಂದುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ನ್ಯೂಯಾರ್ಕ್​ನ ಬ್ರೂಕ್ಲಿನ್​ ನಿವಾಸಿ ಸಿಮೋನೆ 20.5 ಸೆಂಟಿ ಮೀಟರ್​​ ಎತ್ತರ, 22.5 ಸೆಂಟಿಮೀಟರ್​ ಅಗಲ ಹಾಗೂ 1.48 ಮೀ ಸುತ್ತಳತೆಯ ಆಫ್ರೋ ಹೊಂದಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಸಿಮೋನೆ, ಈ ಹಿಂದೆ ವಿಶ್ವ ದಾಖಲೆ ನಿರ್ಮಿಸಿದ್ದ ಐವಿನ್​ ಡುಗಾನ್​ ಹೆಸರು 8 ವರ್ಷಗಳ ಕಾಲ ವಿಶ್ವ ದಾಖಲೆಯ ಪುಟಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ನಾನು ಒಂದು ದಿನ ಈ ದಾಖಲೆಯಲ್ಲಿ ಮುರಿಯುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

ಸಿಮೋನೆಯ ಈ ನೈಸರ್ಗಿಕ ಕೂದಲನ್ನ ಬೆಳೆಸೋಕೆ ಶುರು ಮಾಡಿ 9ವರ್ಷಗಳು ಕಳೆದಿದೆ. ಈ ಹಿಂದೆ ಅವರು ತಮ್ಮ ಗುಂಗುರ ಕೂದಲನ್ನ ನೇರ ಮಾಡಿಸಿಕೊಂಡಿದ್ದರಂತೆ. ಆದರೆ ತಮ್ಮ 23ನೇ ವಯಸ್ಸಿಗೆ ಕೂದಲಲ್ಲಿ ಯಾವುದೇ ಮಾರ್ಪಾಡು ಮಾಡದೇ ನೈಸರ್ಗಿಕವಾಗೇ ಬೆಳೆಸುವ ನಿರ್ಧಾರಕ್ಕೆ ಬಂದಿದ್ದರು.

ಸಿಮೋನ್​ ಪ್ರಕಾರ ಈ ಕೂದಲನ್ನ ಆರೈಕೆ ಮಾಡೋಕೆ ಸಾಕಷ್ಟು ತಾಳ್ಮೆಯ ಅಗತ್ಯವಿದೆಯಂತೆ. ಅವರು ಸಾಮಾನ್ಯವಾಗಿ ಕಡಿಮೆ ಸಲ್ಫೇಟ್​ ಹೊಂದಿರುವ ಶಾಂಪೂ ಹಾಗೂ ಕೂದಲನ್ನ ನಯವಾಗಿಸಲು ಕಂಡಿಷನರ್​ ಬಳಕೆ ಮಾಡುತ್ತಾರಂತೆ. ತಲೆ ಸ್ನಾನ ಮಾಡುವಾಗ ಕೂದಲನ್ನ ನಾಲ್ಕು ಭಾಗ ಮಾಡಿ ತೊಳೆಯುತ್ತಾರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...