ಕಳೆದ ವರ್ಷ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ರಾನು ಮಂಡಲ್ ಕೆಲ ಸಮಯದಿಂದ ಜನರ ಕಣ್ಣಿಗೆ ಬಿದ್ದೇ ಇಲ್ಲ.
ಸಾಮಾಜಿಕ ಜಾಲತಾಣದಲ್ಲಿ ಒಂದು ಕಾಲದಲ್ಲಿ ಹಲ್ಚಲ್ ಎಬ್ಬಿಸಿದ್ದ ಈ ಗಾಯಕಿ ಎಲ್ಲಿ ಹೋದ್ರು ಎಂಬ ಪ್ರಶ್ನೆ ಅನೇಕರಲ್ಲಿತ್ತು.
ಪಶ್ಚಿಮ ಬಂಗಾಳಧ ರನಾಘಾಟ್ ನ ಈ ಗಾಯಕಿ ಇದೀಗ ಬಂಗಾಳಿಯ ಪ್ರಸಿದ್ಧ ಗಾಯಕ ರೂಪಾಂಕರ್ ಭಾಗ್ಚಿ ಜೊತೆ ಕೆಲಸ ಮಾಡ್ತಿದ್ದಾರೆ.
ರನಾಘಟ್ ನಿಲ್ದಾಣದಲ್ಲಿ ಹಾಡು ಹೇಳ್ತಿದ್ದ ಮೊಂಡಲ್ ಧ್ವನಿ ಲತಾ ಮಂಗೇಶ್ಕರ್ ಧ್ವನಿಯ ಸಾಮ್ಯತೆ ಎಂಬ ಕಾರಣಕ್ಕೆ ರಾತ್ರೋ ರಾತ್ರಿ ಕ್ಲಿಕ್ ಆಗಿದ್ದರು. ಅಲ್ಲೆಲ್ಲೋ ಭಿಕ್ಷೆ ಬೇಡಿ ಹಣ ಸಂಪಾದಿಸುತ್ತಿದ್ದ ರಾನು ಸೋಶಿಯಲ್ ಮೀಡಿಯಾ ನೆರವಿನಿಂದ ತಮ್ಮ ಬದುಕನ್ನೇ ಬದಲಾಯಿಸಿಕೊಂಡಿದ್ದರು.
ಇದಾದ ಬಳಿಕ ಸೈಲೆಂಟ್ ಆಗಿದ್ದ ರಾನು ಇದೀಗ ಮತ್ತೆ ತಮ್ಮ ಸ್ಚರದ ಮೂಲಕ ಜಾದೂ ಮಾಡಲು ಆನ್ಲೈನ್ ವೇದಿಕೆಗೆ ಕಾಲಿಡುತ್ತಿದ್ದಾರೆ, ಡಿಜಿಟಲ್ ಕಾನ್ಸರ್ಟ್ಒಂದರಲ್ಲಿ ರೂಪಾಂಕರ್ ಭಾಗ್ಚಿ ಜೊತೆ ರಾನು ವೇದಿಕೆ ಹಂಚಿಕೊಳ್ಳಲಿದ್ದಾರೆ. ಈ ಕನ್ಸರ್ಟ್ ನರೇಂದ್ರ ಪುರದ ಗಂಘಾರ್ ಸ್ಟುಡಿಯೋದಲ್ಲಿ ನಡೆಯಲಿದೆ.
https://www.facebook.com/permalink.php?story_fbid=413612586677086&id=106849194020095