alex Certify ಪುತ್ರನಿಗೆ ಟ್ರಾಫಿಕ್​ ಸಿಗ್ನಲ್ ಪಾಠ ಮಾಡಿದ ಸಾನಿಯಾ ಮಿರ್ಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರನಿಗೆ ಟ್ರಾಫಿಕ್​ ಸಿಗ್ನಲ್ ಪಾಠ ಮಾಡಿದ ಸಾನಿಯಾ ಮಿರ್ಜಾ

ಟೆನ್ನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ ಇನ್ಸ್​ಟಾಗ್ರಾಂನಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು ಇದರಲ್ಲಿ ಸಾನಿಯಾ ತನ್ನ 2 ವರ್ಷದ ಮಗನಿಗೆ ಟ್ರಾಫಿಕ್​ ಸಿಗ್ನಲ್​ ಬಗ್ಗೆ ಪಾಠ ಮಾಡಿದ್ದಾರೆ.

2010 ರಲ್ಲಿ ಪಾಕಿಸ್ತಾನ ಬ್ಯಾಟ್ಸಮನ್​ ಶೋಯಬ್​ ಮಲಿಕ್​​ರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಸಾನಿಯಾ ದಂಪತಿಗೆ 2 ವರ್ಷದ ಇಝಾನ್​ ಮಿರ್ಜಾ ಮಲ್ಲಿಕ್​ ಎಂಬ ಪುತ್ರನಿದ್ದಾನೆ. ಇನ್ಸ್​​ಟಾಗ್ರಾಂನಲ್ಲಿ ವೈರಲ್​ ಆಗಿರುವ ಈ ವಿಡಿಯೋದಲ್ಲಿ ಸಾನಿಯಾ ಟ್ರಾಫಿಕ್​ ಸಿಗ್ನಲ್​ ಬಗ್ಗೆ ಮಗನಿಗೆ ಪಾಠ ಮಾಡಿದ್ದಾಳೆ.

ಪುಟ್ಟ ವಿಡಿಯೋದಲ್ಲಿ ಪುತ್ರನಿಗೆ ಸಾನಿಯ ಹಸಿರು ದೀಪ ಎಂದರೇನು? ಎಂದು ಕೇಳುತ್ತಾರೆ. ಅದಕ್ಕೆ ಇಝಾನ್​ ಹಸಿರು ದೀಪ ಎಂದರೆ ಹೋಗು ಎಂದರ್ಥ ಎಂದು ಹೇಳುತ್ತಾನೆ. ಹಳದಿ ದೀಪ ಅಂದ್ರೆ ಏನು ಎಂದು ಕೇಳ್ತಿದ್ದಂತೆಯೇ ಕಾಯಬೇಕು ಎಂದು ಇಝಾನ್​ ಉತ್ತರ ನೀಡಿದ್ದಾನೆ, ಕೆಂಪು ದೀಪ ಯಾವುದರ ಸಂಕೇತ ಎಂದು ಕೇಳಿದ್ರೆ ನಿಲ್ಲಿ ಎಂದರ್ಥ ಎಂದು 2 ವರ್ಷದ ಪೋರ ಹೇಳಿದ್ದಾನೆ.

https://www.instagram.com/p/CIValI_Hr2f/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...