ಹುಬ್ಬೇರಿಸುವಂತಿದೆ ಹೊಸ ಫ್ಯಾಷನ್: ಮಾರುಕಟ್ಟೆಗೆ ಬಂತು ಗೋಣಿಚೀಲದ ಪ್ಯಾಂಟ್..! 04-12-2020 10:37AM IST / No Comments / Posted In: Latest News, India ಫ್ಯಾಷನ್ ಲೋಕ ಎಷ್ಟರ ಮಟ್ಟಿಗೆ ಬೆಳೆದಿದೆ ಅಂದರೆ ನಿಮಗೆ ಯಾವ ರೀತಿ ಬೇಕೋ ಆ ರೀತಿಯ ಉಡುಪಗಳು ಸಿಗೋ ಕಾಲವಿದು. ಗ್ರಾಹಕರನ್ನ ಸೆಳೆಯೋ ಜಿದ್ದಿಗೆ ಬಿದ್ದಿರೋ ಅನೇಕ ಬ್ರ್ಯಾಂಡ್ಗಳು ತರಹೇವಾರಿ ಉಡುಪುಗಳನ್ನ ಉತ್ಪಾದನೆ ಮಾಡುತ್ತವೆ. ಆದರೆ ಈ ಫ್ಯಾಷನ್ ಜಗತ್ತಿಗೆ ಇದೀಗ ಹೊಸ ವಿನ್ಯಾಸದ ಪ್ಯಾಂಟ್ ಒಂದು ಸೇರ್ಪಡೆಯಾಗಿದೆ. ಅಂದಹಾಗೆ ಈ ಪ್ಯಾಂಟನ್ನ ನಿರ್ಮಾಣ ಮಾಡಿರೋದು ಸೆಣಬಿನ ದಾರದಲ್ಲಿ ಅಂದರೆ ನೀವು ನಂಬಲೇಬೇಕು. ಮಾರುಕಟ್ಟೆಯಲ್ಲಿ ತರಕಾರಿ ಸಾಗಿಸುವ ಚೀಲದಂತೆ ಕಾಣುವ ಈ ಪ್ಯಾಂಟ್ ಇದೀಗ ಫ್ಯಾಶನ್ ಅಂತೆ. ಈ ವಿಚಿತ್ರ ಪ್ಯಾಂಟ್ನ್ನ ಫೋಟೋ ಶೇರ್ ಮಾಡಿದ ಟ್ವೀಟಿಗರೊಬ್ಬರು ಆಶ್ಚರ್ಯ ಹೊರಹಾಕಿದ್ದಾರೆ. ಟ್ವಿಟರ್ನಲ್ಲಿ ಸದಾ ಸುದ್ದಿಯಲ್ಲಿರುವ ಐಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್, ನನ್ನ ಅಮ್ಮ ಈ ಪ್ಯಾಂಟ್ ನೋಡಿಬಿಟ್ಟರೆ ಅವಳು ನಾಲ್ಕೈದು ಚೀಲ ತೆಗೆದುಕೊಂಡು ಇದೇ ರೀತಿ ಪ್ಯಾಂಟ್ ಹೊಲಿದು ಬಿಡ್ತಾಳೆ ಅಂತಾ ತಮಾಷೆ ಮಾಡಿದ್ದಾರೆ. Okay 😐 pic.twitter.com/6WOMLwPLMd — Arun Bothra 🇮🇳 (@arunbothra) November 24, 2020 Okay 😐 pic.twitter.com/6WOMLwPLMd — Arun Bothra 🇮🇳 (@arunbothra) November 24, 2020