alex Certify ಈ ಸ್ಟೋರಿ ಓದಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸ್ಟೋರಿ ಓದಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ

ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಪತ್ನಿಯ ತಾಯಿಯನ್ನೇ ಪ್ರೀತಿಸಿ ವಿವಾಹವಾಗಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ.

ಹಲವು ವರ್ಷಗಳ ಹಿಂದೆ ಯುವತಿಯೊಬ್ಬರನ್ನು ಪ್ರೀತಿಸಿ ವಿವಾಹವಾಗಿದ್ದ ಸೂರಜ್ ಮೆಹ್ತಾ, ಕೆಲ ಕಾಲ ಪತ್ನಿಯ ಜೊತೆ ಚೆನ್ನಾಗಿಯೇ ಇದ್ದ. ಆದರೆ ಬರಬರುತ್ತಾ ಪತಿ-ಪತ್ನಿ ನಡುವೆ ಜಗಳ ಆರಂಭವಾಗಿ, ಸೂರಜ್ ಪತ್ನಿಯ ತಾಯಿ ಆಶಾದೇವಿ ಜೊತೆ ಸ್ನೇಹ ಬೆಳಸಿದ್ದಾನೆ. ದಿನ ಕಳೆದಂತೆ ಪತ್ನಿಯನ್ನು ದೂರ ಮಾಡಿದ ಸೂರಜ್ ತನ್ನ ಅತ್ತೆಯ ಜೊತೆಯೇ ವಾಸಮಾಡಲು ಆರಂಭಿಸಿದ್ದಾನೆ.

ಪತಿ ಹಾಗೂ ತನ್ನ ತಾಯಿಯ ವರ್ತನೆಯಿಂದ ಬೇಸತ್ತ ಪತ್ನಿ ಸೂರಜ್ ಗೆ ವಿಚ್ಛೇದನ ನೀಡಿದ್ದಾಳೆ. ನಂತರದಲ್ಲಿ ಸೂರಜ್ ತನ್ನ ಅತ್ತೆ ಆಶಾದೇವಿಯನ್ನು ವಿವಾಹವಾಗಿದ್ದಾನೆ. ಬರಬರುತ್ತಾ ಆಶಾದೇವಿ ಹಾಗೂ ಅಳಿಯನ ನಡುವಿನ ಸಂಬಂಧವೂ ಹಳಸಿದೆ. ಇಬ್ಬರ ನಡುವೆ ಜಗಳ, ಮನಸ್ತಾಪ ಆರಂಭವಾಗಿ ಈಗ ಅತ್ತೆ-ಅಳಿಯ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...