alex Certify ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ ಲಸಿಕೆ ಬೇಕಾ ಎಂದು ಪ್ರಶ್ನಿಸಿದ ಹರ್ಭಜನ್​ ಸಿಂಗ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ ಲಸಿಕೆ ಬೇಕಾ ಎಂದು ಪ್ರಶ್ನಿಸಿದ ಹರ್ಭಜನ್​ ಸಿಂಗ್​..!

ಕೊರೊನಾ ವಿರುದ್ಧ ಹೋರಾಡಲು ನಮಗೆ ನಿಜವಾಗಿಯೂ ಲಸಿಕೆ ಬೇಕಾ..? ಇಂತಹದ್ದೊಂದು ಪ್ರಶ್ನೆಯನ್ನ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್​ ಟ್ವಿಟರ್​ನಲ್ಲಿ ಕೇಳಿದ್ದಾರೆ.

ಅಲ್ಲದೇ ಭಾರತೀಯರಿಗೆ ಕೊರೊನಾದಿಂದ ಪಾರಾಗಲು ಲಸಿಕೆಯ ಅಗತ್ಯವಿಲ್ಲ ಅನ್ನೋದಕ್ಕೂ ಹರ್ಭಜನ್​ ಸಿಂಗ್​ ಮಾರ್ಮಿಕವಾಗಿ ಕಾರಣ ನೀಡಿದ್ದಾರೆ.

ಹರ್ಭಜನ್​​ ಸಿಂಗ್​ ಪೋಸ್ಟ್ ಮಾಡಿರುವ ಟ್ವೀಟ್​ನಲ್ಲಿ ಹರ್ಭಜನ್​ ಸಿಂಗ್​ ಲಸಿಕೆ ಏಕೆ ಅಗತ್ಯವಿಲ್ಲ ಅನ್ನೋದನ್ನ ವಿವರಿಸಿದ್ದಾರೆ.

ಕೊರೊನಾ ವಿರುದ್ಧ ಫೈಜರ್​ ಹಾಗೂ ಬಯೋಟೆಕ್​​ 94 ಪ್ರತಿಶತ ಪರಿಣಾಮಕಾರಿಯಾಗಿದೆ. ಮೊರ್ಡೆನಾ ಲಸಿಕೆ 90 ಪ್ರತಿಶತ ಹಾಗೂ ಆಕ್ಸ್​​ಫರ್ಡ್​ ಲಸಿಕೆ 93.6 ಪ್ರತಿಶತ ಪರಿಣಾಮಕಾರಿಯಾಗಿದೆ.

ಆದರೆ ಭಾರತ ಯಾವುದೇ ಲಸಿಕೆಯೇ ಇಲ್ಲದೇ 93.6 ಪ್ರತಿಶತ ರಿಕವರಿ ರೇಟ್​​​ ಹೊಂದಿದೆ. ಇಷ್ಟೊಳ್ಳೆ ರಿಕವರಿ ರೇಟ್​ ಹೊಂದಿರುವ ನಮಗೆ ನಿಜಕ್ಕೂ ಲಸಿಕೆ ಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.

ಹರ್ಭಜನ್​ ಸಿಂಗ್​ ಪೋಸ್ಟ್​ ನೋಡಿ ಅನೇಕರು ಶಹಬ್ಬಾಸ್​ ಅಂದಿದ್ರೆ ಇನ್ನೂ ಕೆಲವರು ಇಂತಹ ಮೂರ್ಖತನದ ವಿಚಾರಗಳನ್ನ ಶೇರ್​ ಮಾಡಬೇಡಿ ಎಂದು ಕಮೆಂಟ್​ ಮಾಡಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...