alex Certify ಗಮನಿಸಿ: ಐಟಿ ರಿರ್ಟನ್ಸ್​​ಗೆ ʼಆಧಾರ್ʼ​ ಲಿಂಕ್​ ಮಾಡಲು ತೆರಿಗೆದಾರರಿಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಐಟಿ ರಿರ್ಟನ್ಸ್​​ಗೆ ʼಆಧಾರ್ʼ​ ಲಿಂಕ್​ ಮಾಡಲು ತೆರಿಗೆದಾರರಿಗೆ ಇಲ್ಲಿದೆ ಮಾಹಿತಿ

ಆದಾಯ ತೆರಿಗೆ ನಿಯಮದಂತೆ ನೀವು ಇನ್ಕಮ್​ ಟ್ಯಾಕ್ಸ್ ರಿರ್ಟನ್ಸ್ ಪಾವತಿ ಮಾಡೋವಾಗ ನಿಮ್ಮ ಆಧಾರ್​ ಕಾರ್ಡ್​ ನಂಬರ್​, ಪಾನ್​ ಕಾರ್ಡ್​ ನಂಬರ್​​ನ್ನ ನಮೂದಿಸೋದು ಕಡ್ಡಾಯ. ಆದರೆ ಐಟಿಆರ್​​ಗೆ ಆಧಾರ್​ ಕಾರ್ಡ್​ ನೋಂದಾವಣೆ ಹೇಗೆ ಮಾಡಬೇಕು ಅನ್ನೋ ಗೊಂದಲ ಅನೇಕರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಮೊದಲು https://www.incometaxindiaefiling.gov.in/home ವೆಬ್​ಸೈಟ್​ಗೆ ಲಾಗಿನ್​ ಆಗಿ. ಹೋಂ ಪೇಜ್​​ನಲ್ಲೇ ನಿಮಗೆ ಪ್ರೊಫೈಲ್​ ಸೆಟ್ಟಿಂಗ್​ ಎಂಬ ಆಯ್ಕೆ ಕಾಣಸಿಗುತ್ತೆ . ಅದರಲ್ಲಿ ಲಿಂಕ್​ ಆಧಾರ್​ನ್ನು ಆಯ್ಕೆ ಮಾಡಿದೆ.

ಇಲ್ಲಿ ನಿಮ್ಮ ಆಧಾರ್​ ಕಾರ್ಡ್​ ಸಂಖ್ಯೆಯನ್ನು ಟೈಪ್​ ಮಾಡಿ ಬಳಿಕ ಲಿಂಕ್​ ನೌ ಆಪ್ಶನ್​​ನ್ನು ಒತ್ತಿರಿ. ಬಳಿಕ ನಿಮ್ಮ ಆಧಾರ್​ ಕಾರ್ಡ್ ವಿವರಣೆ ಹಾಗೂ ಪಾನ್​ ಕಾರ್ಡ್​ ಮಾಹಿತಿಯನ್ನ ನಮೂದಿಸಿ. ಇದಾದ ಬಳಿಕ ನಿಮಗೆ ಐಟಿಆರ್​ ಪರಿಶೀಲನೆಗಾಗಿ ಆಧಾರ್​ ಕಾರ್ಡ್​ನಲ್ಲಿರುವ ನಿಮ್ಮ ಮೊಬೈಲ್​ ಸಂಖ್ಯೆಗೆ ಒಟಿಪಿ ಬರಲಿದೆ. ಈ ಒಟಿಪಿಯನ್ನ ಟೈಪ್​ ಮಾಡಿದ ಬಳಿಕ ನಿಮ್ಮ ಆಧಾರ್​ ಕಾರ್ಡ್​ ಐಟಿಆರ್​ಗೆ ಲಿಂಕ್​ ಆಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...