ಕೊರೊನಾ ಮಹಾಮಾರಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಕಳೆದ 9 ತಿಂಗಳಿಂದಲೂ ಬಿಟ್ಟೂ ಬಿಡದೆ ಕಾಡುತ್ತಿರುವ ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಲೇ ಇವೆ.
ಡಿಸೆಂಬರ್ ಕೊನೆಯ ವಾರ ಅಥವಾ ಜನವರಿ ಮೊದಲ ವಾರದಲ್ಲಿ ನಮ್ಮ ದೇಶಕ್ಕೆ ಲಸಿಕೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಲಸಿಕೆ ಸ್ಟೋರೇಜ್‌ಗೆ ಬೇಕಾದ ವ್ಯವಸ್ಥೆಯನ್ನೂ ಈಗಾಗಲೇ ಮಾಡಿಕೊಳ್ಳಲಾಗಿದೆ.
ಇದರ ಬೆನ್ನಲ್ಲೇ ಮತ್ತೊಂದು ಖುಷಿಯ ವಿಚಾರ ಅಂದರೆ, ಬ್ರಿಟನ್‌ನಲ್ಲಿ ಜನ ಬಳಕೆಗೆ ಲಸಿಕೆ ಸಿದ್ದವಾಗಿದೆ. ಅಮೆರಿಕಾ ಮೂಲದ ಫೈಜರ್ ಕಂಪನಿ ಈ ಲಸಿಕೆ ತಯಾರಿಸಿದ್ದು ಇನ್ನೊಂದು ವಾರದಲ್ಲಿ ಕೊರೊನಾ ಲಸಿಕೆಯನ್ನು ಹಂಚಲಾಗುತ್ತದೆಯಂತೆ.
ಕೊರೊನಾ ಲಸಿಕೆಗೆ ಅಧಿಕೃತವಾಗಿ ಸಮ್ಮತಿಯನ್ನು ನೀಡಿದ ಮೊದಲ ದೇಶ ಅನ್ನೋ ಹೆಗ್ಗಳಿಗೆ ಇದೀಗ ಬ್ರಿನಟ್‌ನದ್ದು. ಎಮ್‌ಹೆಚ್‌ಆರ್‌ಎ ಫೈಜರ್-ಬಯೋಎನ್‌ಟೆಕ್ ಲಸಿಕೆ ಬಳಸೋದಿಕ್ಕೆ ತುರ್ತು ಅನುಮತಿಯನ್ನು ನೀಡಿದೆ. ಅಲ್ಲಿನ ಸರ್ಕಾರ 2 ಕೋಟಿ ಲಸಿಕೆಗೆ ಬೇಡಿಕೆ ಇಟ್ಟಿದೆ. ಇದರ ಬೆಲೆ ಕೂಡ ಕಡಿಮೆ ಇದೆ ಎನ್ನಲಾಗುತ್ತಿದೆ.