ಆಫ್ರಿಕಾದ ಕಾಡುಗಳಲ್ಲಿ ವಾಸಿಸುವ 21 ವರ್ಷದ ಈತ ಪ್ರತಿನಿತ್ಯ 30 ಕಿಮೀ ನಡೆಯುತ್ತಾರೆ. ನೋಡಲು ಕೊಂಚ ಭಿನ್ನವಾಗಿರುವ ಕಾರಣ ತನ್ನ ಗ್ರಾಮಸ್ಥರಿಂದಲೇ ಅಸ್ಪೃಶ್ಯತೆಗೆ ಒಳಗಾದ ಈ ವ್ಯಕ್ತಿಗೆ ಜಗತ್ತಿನ ಮೂಲೆ ಮೂಲೆಗಳಿಂದ ಜನರು ನೆರವಿನ ಹಣ ಕಳುಹಿಸುತ್ತಿದ್ದಾರೆ.
’ನಿಜ ಜೀವನದ ಮೋಗ್ಲಿ’ ಎಂದು ಕರೆಯಲ್ಪಡುವ ರ‍್ವಾಂಡಾದ ಜಂಜಿಮಾನ್ ಎಲ್ಲಿ ಹೆಸರಿನ ಈತ ಕಾಡುಗಳಲ್ಲೇ ತನ್ನ ಜೀವತದ ಹೆಚ್ಚಿನ ಅವಧಿ ಕಳೆಯುತ್ತಿದ್ದು, ಆತನ ರೂಪವನ್ನು ಕಂಡು ಆತನ ಗ್ರಾಮಸ್ಥರು ಸಾಕಷ್ಟು ಅಣಕ ಮಾಡಿದ್ದಾರೆ.
1999ರಲ್ಲಿ ಜನಿಸಿದ ಎಲ್ಲಿಗೆ ಮೈಕ್ರೋಸೆಫಾಲಿ (ದೇಹದ ಅನುಪಾತಕ್ಕಿಂತ ಕಡಿಮೆ ಗಾತ್ರದ ತಲೆಯೊಂದಿಗೆ ಮಗು ಹುಟ್ಟುವುದು) ಸಮಸ್ಯೆ ಇದೆ. ಎಲ್ಲಿ ತಾಯಿಗೆ ಐದು ಮಕ್ಕಳು ಜನಿಸಿ, ಅವು ಹುಟ್ಟುತ್ತಲೇ ಮೃತಪಟ್ಟಿದ್ದವು. ದೇವರಲ್ಲಿ ಪರಿಪರಿಯಾಗಿ ಬೇಡಿಕೊಂಡಿದ್ದ ಎಲ್ಲಿ ತಾಯಿ ಕೊನೆಗೆ ಈತನಿಗೆ ಜನ್ಮವಿತ್ತಿದ್ದಾರೆ.