ಟಿನಾ ಹಾಗೂ ಬೆನ್ ಗಿಬ್ಸನ್ ಮಕ್ಕಳಿಲ್ಲದೇ ಅನೇಕ ವರ್ಷಗಳ ದಾಂಪತ್ಯ ಕಳೆದುಬಿಟ್ಟಿದ್ದರು. ಅವರ ಸುದೀರ್ಘ ಪ್ರಾರ್ಥನೆಗೆ ಕೊನೆಗೂ ಫಲ ಸಿಕ್ಕಿದ್ದು, ವೈಜ್ಞಾನಿಕ ಆವಿಷ್ಕಾರದಿಂದಾಗಿ ಅವರಿಗೆ ಈಗ ಇಬ್ಬರು ಮಕ್ಕಳಿದ್ದಾರೆ.
ಇಬ್ಬರು ಮಕ್ಕಳಲ್ಲಿ ಮೋಲಿ ಗಿಬ್ಸನ್‌ಗೆ ಈಗ ಒಂದು ತಿಂಗಳು. ಆಸಕ್ತಿಕರ ವಿಚಾರವೆಂದರೆ, ಮೋಲಿ ಕಳೆದ 27 ವರ್ಷಗಳ ಅವಧಿಯಲ್ಲಿ ಯಾವ ವರ್ಷವಾದರೂ ಜನಿಸಿರುವ ಸಾಧ್ಯತೆ ಇದೆ. ಏಕೆಂದರೆ, ಅಕ್ಟೋಬರ್ 1992ರಿಂದ ಆಕೆಯ ಭ್ರೂಣವನ್ನು ಶೀತಲೀಕರಿಸಿ ಇಡಲಾಗಿತ್ತು. ಕೇವಲ ಆರು ಪೌಂಡ್ 13 ಔನ್ಸ್ ತೂಗುವ ಮೋಲಿ, ಸುದೀರ್ಘಾವಧಿಗೆ ಭ್ರೂಣಾವಸ್ಥೆಯಲ್ಲೇ ಇದ್ದು ಜನ್ಮ ಪಡೆದ ಶಿಶುವಾಗಿದ್ದಾಳೆ.
ಈ ಹಿಂದೆ 2017ರಲ್ಲಿ ಜನಿಸಿದ್ದ ಮೋಲಿ ಸಹೋದರಿ ಎಮ್ಮಾ ಈ ದಾಖಲೆ ಹೊಂದಿದ್ದಳು. ಭ್ರೂಣ ದತ್ತು ಪಡೆಯುವ ಪ್ರಕ್ರಿಯೆ ಮೂಲಕ ಟಿನಾ ಹಾಗೂ ಬೆನ್ ಪೋಷಕರಾಗಿದ್ದಾರೆ.