ಶಾಂಘೈ: ಕೊರೊನಾ ಸುರಕ್ಷತೆಗಾಗಿ ಚೀನಾದ ಶಾಂಘೈನ ಶಾಲೆಯೊಂದರಲ್ಲಿ ಊಟ ತಯಾರಿಕೆ ಹಾಗೂ ಬಡಿಸಲು ರೋಬೋಟ್ ಬಳಸಲಾಗುತ್ತಿದೆ.
ಮಿಚಿಗನ್ ಎಕ್ಸ್ ಪೆರಿಮೆಂಟಲ್ ಸ್ಕೂಲ್ ನಲ್ಲಿ 11 ರಿಂದ 13 ವರ್ಷದ ಮಕ್ಕಳು ತಾತ್ಕಾಲಿಕ ಅವಧಿಗೆ ಅಕ್ಟೊಬರ್ ನಿಂದ ರೋಬೋಟ್ ಬಳಕೆ ಪ್ರಾರಂಭಿಸಿದ್ದಾರೆ. ಸುಮಾರು ಮೂರು ಮೀಟರ್ ಎತ್ತರದ ಹಳದಿ ರೋಬೋಟ್ ಬೇಯಿಸಿದ ಮೊಟ್ಟೆ, ಚಿಕನ್ ಗಳನ್ನು ಹಿಡಿದು ತರುತ್ತದೆ. ಊಟದ ಸಮಯದಲ್ಲಿ ಅದನ್ನು ಬಿಸಿ ಮಾಡಿಕೊಡುತ್ತದೆ.
“ಕ್ಸಿಕ್ಸಿ ಇಂಟಲಿಜೆಂಟ್ ಕಿಚನ್ ಎಂಬ ಕಂಪನಿ ಶಾಲೆಗೆ ರೋಬೋಟ್ ದೇಣಿಗೆ ನೀಡಿದೆ. ಮಾನವನ ಹಸ್ತಕ್ಷೇಪವಿಲ್ಲದೇ ರೋಬೋಟ್ ಅತಿ ಸುರಕ್ಷಿತವಾಗಿ ಅಡುಗೆ ತಯಾರಿಸುತ್ತದೆ. ಅಷ್ಟೆ ಅಲ್ಲದೆ, ಉಪ್ಪು, ಕಾಳು ಮೆಣಸು ಮುಂತಾದ ಮಸಾಲೆ ಪದಾರ್ಥಗಳನ್ನು ಅತಿ ನಿಖರವಾಗಿ ಬೆರೆಸುತ್ತದೆ” ಎಂದು ಶಾಲೆಯ ಉಪಾಧ್ಯಕ್ಷ ಸಾಂಗ್ ವೆಂಜಿ ಹೇಳಿದ್ದಾರೆ.