ಕಳೆದ ಕೆಲ ದಿನಗಳಿಂದ ಏರಿಕೆ ಕಾಣುತ್ತಿದ್ದ ಆಲೂಗಡ್ಡೆ ದರ ಇದೀಗ ಕೆಜಿಗೆ 50 ರೂಪಾಯಿ ಆಗಿದ್ದು ಮುಂದಿನ ದಿನಗಳಲ್ಲಿ ಕೆಜಿಗೆ 40 ರೂಪಾಯಿ ತಲುಪಲಿದೆ ಅಂತಾ ಪಶ್ಚಿಮ ಬಂಗಾಳದ ಕೋಲ್ಡ್ ಸ್ಟೋರೇಜ್ ಅಸೋಸಿಯೇಶನ್ ಹೇಳಿದೆ.
ಕೋಲ್ಡ್ ಸ್ಟೋರೇಜ್ ಗೇಟ್ನಲ್ಲಿ ವಿವಿಧ ಪ್ರಭೇದಗಳ ಸಗಟು ದರವು ಕಳೆದ ಮೂರು ದಿನಗಳಲ್ಲಿ ಪ್ರತಿ ಕೆಜಿಗೆ 5 ರೂಪಾಯಿಗಳಷ್ಟು ಇಳಿಕೆಯಾಗಿದೆ. ಹಾಗೂ ಇದು ಇನ್ನೂ 28 ರೂಪಾಯಿಗೆ ಇಳಿಕೆ ಕಾಣುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳ ಕೋಲ್ಡ್ ಸ್ಟೋರೇಜ್ ಅಸೋಸಿಯೇಶನ್ ಅಧಿಕಾರಿ ಮಾಹಿತಿ ನೀಡಿದ್ರು.