ಬೀಜಿಂಗ್: ಭಾರತ ಮತ್ತು ಚೀನಾ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆಯೇ ಚೀನಾ ಭಾರತದಿಂದ ಅಕ್ಕಿ ತರಿಸಿಕೊಳ್ಳಲು ಮುಂದಾಗಿದೆ. 30 ವರ್ಷಗಳ ನಂತರ ಭಾರತದಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳಲಾಗುವುದು.
ಅಕ್ಕಿ ರಫ್ತು ಮಾಡುವ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ಥೈಲ್ಯಾಂಡ್, ವಿಯೆಟ್ನಾಂ, ಮಯನ್ಮಾರ್ ಮೊದಲಾದ ದೇಶಗಳಿಂದ ಪ್ರತಿವರ್ಷ 40 ಲಕ್ಷ ಟನ್ ಅಕ್ಕಿಯನ್ನು ಚೀನಾ ಆಮದು ಮಾಡಿಕೊಳ್ಳುತ್ತದೆ. ಆದರೆ, ಅನೇಕ ವರ್ಷಗಳಿಂದ ಭಾರತದಿಂದ ಅಕ್ಕಿ ತರಿಸಿಕೊಳ್ಳದ ಚೀನಾ 30 ವರ್ಷಗಳ ನಂತರ ನಿರ್ಧಾರ ಬದಲಿಸಿ ಅಕ್ಕಿ ತರಿಸಿಕೊಂಡಿದೆ. ಡಿಸೆಂಬರ್ ನಿಂದ ಫೆಬ್ರವರಿವರೆಗಿನ ಅವಧಿಯಲ್ಲಿ ಒಂದು ಲಕ್ಷ ಟನ್ ಅಕ್ಕಿಯನ್ನು ಚೀನಾ ಖರೀದಿಸಲಿದ್ದು, ಪ್ರತಿ ಟನ್ ಗೆ 22 ಸಾವಿರ ರೂಪಾಯಿ ಪಾವತಿಸಲಿದೆ.