ನವದೆಹಲಿ: ಅನಿವಾಸಿ ಭಾರತೀಯ(NRI) ಮತದಾರರಿಗೂ ಅಂಚೆ ಮೂಲಕ ಮತ ಚಲಾಯಿಸುವ ಸೌಲಭ್ಯ ಕಲ್ಪಿಸುವಂತೆ ಚುನಾವಣಾ ಆಯೋಗದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಅರ್ಹ ಅನಿವಾಸಿ ಭಾರತೀಯ ಮತದಾರರಿಗೆ ಅಂಚೆ ಮೂಲಕ ಮತ ಚಲಾವಣೆ ಸೌಲಭ್ಯ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. 2018 ರ ಅಕ್ಟೋಬರ್ ನಲ್ಲಿ ಅನಿವಾಸಿ ಭಾರತೀಯರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸುವ ಕುರಿತಾದ ವಿಧೇಯಕಕ್ಕೆ ಲೋಕಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಕಾರಣ ಅನುಮೋದನೆ ದೊರೆತಿರಲಿಲ್ಲ.
ಕೆಲವೇ ತಿಂಗಳುಗಳಲ್ಲಿ ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳ, ಕೇರಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಅರ್ಹ ಅನಿವಾಸಿ ಭಾರತೀಯರಿಗೆ ಅಂಚೆ ಮೂಲಕ ಮತದಾನ ಸೌಕರ್ಯವನ್ನು ಕಾರ್ಯಗತಗೊಳಿಸಲು ಚುನಾವಣಾ ಆಯೋಗ ಸಿದ್ಧವಾಗಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿದೆ.