ಆಗಸದಲ್ಲಿ ಮೂಡಿದ ದೃಶ್ಯ ಕಾವ್ಯ ಕ್ಯಾಮರಾದಲ್ಲಿ ಸೆರೆ 02-12-2020 11:27AM IST / No Comments / Posted In: Latest News, International ಗಿಡುಗನ ದಾಳಿಯಿಂದ ತಪ್ಪಿಸಿಕೊಳ್ಳಲಿಕ್ಕೋಸ್ಕರ ಗುಬ್ಬಚ್ಚಿಗಳ ಗುಂಪು ಒಂದಾಗಿ ಗೋಳಾಕಾರದ ವ್ಯೂಹ ಮಾಡಿಕೊಂಡ ಅದ್ಭುತ ದೃಶ್ಯ ಇಂಗ್ಲೆಂಡ್ನ ನಾರ್ಥಾಂಟ್ಸ್ನಲ್ಲಿ ಕಂಡುಬಂದಿದೆ. 64 ವರ್ಷದ ಛಾಯಾಗ್ರಾಹಕ ಡೇವಿಡ್ ಸ್ಮಿತ್ ಎಂಬವರು ನಾರ್ಥಾಂಪ್ಟನ್ನಲ್ಲಿರುವ ಪ್ರಕೃತಿ ಮೀಸಲು ಪ್ರದೇಶದಲ್ಲಿ ಈ ಅದ್ಭುತ ದೃಶ್ಯವನ್ನ ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿದಿದ್ದಾರೆ. ದಿ ಡೇಲಿ ಮೇಲ್ ವರದಿ ಪ್ರಕಾರ, ನವೆಂಬರ್ 26ರ ಸಂಜೆ 4:15ರ ಸುಮಾರಿಗೆ ಈ ದೃಶ್ಯವನ್ನ ಕ್ಲಿಕ್ಕಿಸಲಾಗಿದೆ. ಈ ಸುಂದರ ದೃಶ್ಯವನ್ನ ಸೆರೆಹಿಡಿಯಲು ಡೇವಿಡ್ ಬರೋಬ್ಬರಿ 1 ಗಂಟೆಗಳ ಕಾಲ ಕಾದಿದ್ದಾರಂತೆ. A Sparrowhawk having a ball with the Starling murmuration over Storton’s Pits yesterday. #NorthantsBirds @wildlifebcn @BBCSpringwatch @WildlifeMag @alanthetortoise @laughtonbob @RobLaughton82 @em_edgar79 pic.twitter.com/k2HWzS9EIv — David Smith (@barbeldave) November 27, 2020