ಹುಕ್ಕೇರಿ: ನಾವು 17 ಜನರೂ ಹೆಚ್. ವಿಶ್ವನಾಥ್ ಜತೆಗಿದ್ದೇವೆ. ಹೈಕೋರ್ಟ್ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಹುಕ್ಕೇರಿಯಲ್ಲಿ ಮಾತನಾಡಿದ ಸಚಿವ ಜಾರಕಿಹೊಳಿ, ಆಣೆ ಪ್ರಮಾಣ ಮಾಡಿದ್ದಕ್ಕೆ ವಿಶ್ವನಾಥ್ ಗೆ ಶಿಕ್ಷೆಯಾಗಿದೆ ಎಂಬ ಶಾಸಕ ಸಾ.ರಾ ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದರು. ರಾಜಕೀಯದಲ್ಲಿ ಯಾವ ಶಾಪಕ್ಕೂ ಶಕ್ತಿಯಿಲ್ಲ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದರು.
ಹೆಚ್.ವಿಶ್ವನಾಥ್ ಪರ ನಾವು 16 ಜನರೂ ಜತೆಗಿದ್ದೇವೆ. ಎಲ್ಲರೂ ಸೇರಿ ಕಾನೂನು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.