ನ್ಯೂಯಾರ್ಕ್: 2020 ಎಂದೂ ಮರೆಯಲಾಗದ ಎರಡು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ. ಕೊರೊನಾ ಮಹಾಮಾರಿಯಿಂದ ಅಮೆರಿಕಾದಲ್ಲಿ ಸಾಕಷ್ಟು ಜನ ಮೃತಪಟ್ಟಿದ್ದಾರೆ. ಇನ್ನು ಕಪ್ಪು ಜನರ ಹಕ್ಕಿಗಾಗಿ ದೊಡ್ಡ ಹೋರಾಟ “ಬ್ಲ್ಯಾಕ್ ಲೈವ್ಸ್ ಮ್ಯಾಟರ್” ನಡೆದಿದೆ.
ಆ ನೆನಪಿಗಾಗಿ ಅಮೆರಿಕಾದ ಆಸ್ಕರ್ ಅಕಾಡೆಮಿ ಪ್ರಶಸ್ತಿ ವಿಜೇತ ಪ್ರೊಡಕ್ಷನ್ ಡಿಸೈನರ್ ಹಾನಾ ಬ್ಯಾಚುಲರ್ ತಮ್ಮ ಮನೆಗೆ ಕಪ್ಪು ಬಣ್ಣ ಬಳಿಸಿದ್ದಾರೆ. ಗೋಡೆ, ಮೇಲ್ಛಾವಣಿ ಎಲ್ಲದಕ್ಕೂ ಕಪ್ಪು ಬಣ್ಣ ಬಳಿದಿದ್ದಾರೆ. ರಾತ್ರಿಯೂ ಕಾಣುವಂತೆ ಬಾಗಿಲಿಗೆ ಮಾತ್ರ ಬಿಳಿ ಹಾಗೂ ಕಿಟಕಿಗೆ ಲೋಹದ ಕೋಟ್ ಮಾಡಿಸಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನ.27 ರಂದು ತಮ್ಮ ಕಪ್ಪು ಮನೆಯ ಫೋಟೋ ಪ್ರಕಟಿಸಿದ್ದಾರೆ. “ಗಂಟಲು ಖಾಲಿ- 2020 ರ ನೆನಪಿಗಾಗಿ ನಾನು ನನ್ನ ಮನೆಗೆ ಕಪ್ಪು, ಕಪ್ಪು, ಕಪ್ಪು ಕಪ್ಪು ಬಣ್ಣ ಮಾಡಿಸಿದ್ದೇನೆ” ಎಂದು ಬರೆದಿದ್ದಾರೆ.