
ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಮುಖದ ತ್ವಚೆ ಮೃದುವಾಗಿರುತ್ತದೆ ಮತ್ತು ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಮುಖದ ತ್ವಚೆಯ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ.
ಈಗ ದಿನವಿಡೀ ಮಾಸ್ಕ್ ಹಾಕಿಕೊಳ್ಳುವುದು ಕಡ್ಡಾಯವಾದ ಬಳಿಕ ಅದರಿಂದಲೇ ಮೊಡವೆಗಳು ಹೆಚ್ಚುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದು ನಿಜವೂ ಇರಬಹುದು. ಏಕೆಂದರೆ ದಿನವಿಡೀ ಮಾಸ್ಕ್ ನೊಳಗೆ ಬೆವರುವ ಮುಖ ಹೆಚ್ಚಿನ ಮೊಡವೆಗಳ ಹುಟ್ಟಿಗೆ ಕಾರಣವಾಗಬಹುದು.
ಮಾಸ್ಕ್ ಒಳಗಿರುವ ಬ್ಯಾಕ್ಟೀರಿಯಾಗಳು ಬೇರೆಲ್ಲೂ ಹೋಗಲು ಜಾಗವಿಲ್ಲದ ಕಾರಣ ಸಣ್ಣ ರಂಧ್ರಗಳ ಮೂಲಕ ಒಳಹೊಕ್ಕು ಕೆಲವೇ ದಿನಗಳಲ್ಲಿ ಮೊಡವೆಯಾಗಿ ರೂಪಗೊಂಡು ನಿಮ್ಮ ಸೌಂದರ್ಯ ಹಾಳಾಗಲು ಕಾರಣವಾಗುತ್ತಿವೆ. ಇದನ್ನು ದೂರ ಮಾಡಲು ನಿತ್ಯ ತೊಳೆದ ಮಾಸ್ಕ್ ಅನ್ನೇ ಧರಿಸಿ. ನಿತ್ಯ ಮರೆಯದೆ ಮಾಸ್ಕ್ ಅನ್ನು ತೊಳೆದು ಹಾಕಿ.
ಮನೆಯಿಂದ ಹೋಗಿ ಬರಲೊಂದು ಮಾಸ್ಕ್, ಕಚೇರಿ ಕೆಲಸದ ವೇಳೆ ಒಂದು ಮಾಸ್ಕ್ ಬಳಸುವುದು ಇನ್ನೂ ಒಳ್ಳೆಯದು. ಮಾಸ್ಕ್ ತೆಗೆದಾಕ್ಷಣ ಸ್ವಚ್ಛವಾದ ನೀರಿನಿಂದ ಮುಖ ತೊಳೆಯಿರಿ ಮತ್ತು ಮಾಯಿಸ್ಚರೈಸರ್ ಹಚ್ಚಿಕೊಳ್ಳಿ. ಸದ್ಯದ ಪರಿಸ್ಥಿತಿಯಲ್ಲಿ ನೀವು ಮಾಸ್ಕ್ ಧರಿಸದೆ ಇರಲು ಸಾಧ್ಯವಿಲ್ಲವಾದ್ದರಿಂದ ಅಗತ್ಯಕ್ಕೆ ತಕ್ಕಂತೆ ಬದಲಾಗಿ.