ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಜೇನು ನೊಣಗಳ ದೊಡ್ಡ ಹಿಂಡೊಂದು ಏರ್ ವಿಸ್ತಾರಾ ವಿಮಾನವೊಂದರ ಕಿಟಕಿ ಮೇಲೆ ಕಾಣಿಸಿಕೊಂಡಿವೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾರ್ಕ್ ಆಗಿರುವ ವಿಮಾನದ ಮೇಲಿರುವ ಜೇನ್ನೊಣಗಳನ್ನು ತೆರವುಗೊಳಿಸಲು ಅಗ್ನಿಶಾಮಕ ಸಿಬ್ಬಂದಿಗೆ ಜಲ ಫಿರಂಗಿ ಬಳಸಬೇಕಾಗಿ ಬಂತು.
ಇಂಥದ್ದೇ ಮತ್ತೊಂದು ಘಟನೆ 2019ರಲ್ಲಿ ಘಟಿಸಿತ್ತು. ಕೋಲ್ಕತ್ತಾದಿಂದ ಅಗರ್ತಲಾದತ್ತ ಹೊರಟಿದ್ದ ವಿಮಾನವೊಂದರ ಕಾಕ್‌ಪಿಟ್‌ನಲ್ಲಿ ಜೇನ್ನೊಣಗಳ ಕಾರಣ ಎರಡೂವರೆ ಗಂಟೆ ತಡವಾಗಿ ಹೊರಟಿತ್ತು.
https://twitter.com/san1suresh/status/1333304777770352643?ref_src=twsrc%5Etfw%7Ctwcamp%5Etweetembed%7Ctwterm%5E1333313495094333441%7Ctwgr%5E%7Ctwcon%5Es2_&ref_url=https%3A%2F%2Findianexpress.com%2Farticle%2Ftrending%2Ftrending-in-india%2Fviral-video-parked-aircraft-in-kolkata-spotted-with-beehive-7073913%2F