ಬೆಂಗಳೂರು: ಡಿಸೆಂಬರ್ 22, 27 ರಂದು ಎರಡು ಹಂತಗಳಲ್ಲಿ ರಾಜ್ಯದ 30 ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ಡಿಸೆಂಬರ್ 30 ರಂದು ಫಲಿತಾಂಶ ಪ್ರಕಟವಾಗಲಿದೆ.
ಬೀದರ್ ನಲ್ಲಿ ಮಾತ್ರ ಇವಿಎಂ ಬಳಕೆ ಮಾಡಲಿದ್ದು ಉಳಿದ ಕಡೆಗಳಲ್ಲಿ ಮತಪತ್ರವನ್ನು ಬಳಸಲಾಗುವುದು. 6004 ಗ್ರಾಮಪಂಚಾಯಿತಿಗಳಲ್ಲಿ 5672 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 35,884 ಕ್ಷೇತ್ರಗಳ 92,121 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಮೊದಲ ಹಂತದ ಚುನಾವಣೆಗೆ ಡಿಸೆಂಬರ್ 7 ರಂದು ಅಧಿಸೂಚನೆ ಹೊರಡಿಸಲಿದ್ದು, ಡಿಸೆಂಬರ್ 11 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ, ಡಿಸೆಂಬರ್ 12 ರಂದು ನಾಮಪತ್ರ ಪರಿಶೀಲನೆ, ಡಿಸೆಂಬರ್ 14 ನಾಮಪತ್ರ ವಾಪಸ್ ಗೆ ಕೊನೆ ದಿನ, ಡಿಸೆಂಬರ್ 22 ರಂದು ಮತದಾನ, ಡಿಸೆಂಬರ್ 24 ಅವಶ್ಯಕತೆಯಿದ್ದಲ್ಲಿ ಮರುಮತದಾನ ಹಾಗೂ ಡಿಸೆಂಬರ್ 30 ಮತಎಣಿಕೆ ನಡೆಯಲಿದೆ.
ಎರಡನೇ ಹಂತದ ಚುನಾವಣಾ ವೇಳಾಪಟ್ಟಿಯ ಅನ್ವಯ ಡಿಸೆಂಬರ್ 11 ರಂದು ಅಧಿಸೂಚನೆ ಪ್ರಕಟವಾಗಲಿದ್ದು, ಡಿಸೆಂಬರ್ 16 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಡಿಸೆಂಬರ್ 17 ರಂದು ನಾಮಪತ್ರ ಪರಿಶೀಲನೆ, ನಡೆಯಲಿದ್ದು ಡಿಸೆಂಬರ್ 19 ರಂದು ನಾಮಪತ್ರ ವಾಪಸ್ ಕೊನೆಯ ದಿನ, ಡಿಸೆಂಬರ್ 27 ಮತದಾನ, ಡಿಸೆಂಬರ್ 29 ರಂದು ಅವಶ್ಯಕತೆಯಿದ್ದಲ್ಲಿ ಮರು ಮತದಾನ ನಡೆಯಲಿದೆ. ಡಿಸೆಂಬರ್ 30 ರಂದು ಫಲಿತಾಂಶ ಪ್ರಕಟವಾಗಲಿದೆ.