ಮಹಾಲಿಂಗಪುರ: ಮಹಾಲಿಂಗಪುರ ಪುರಸಭೆ ಚುನಾವಣೆ ವೇಳೆ ನಡೆದಿದ್ದ ಗಲಾಟೆ ವೇಳೆ ನೂಕಾಟ-ತಳ್ಳಾಟ ನಡೆದು ಗಾಯಗೊಂಡಿದ್ದ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಗೆ ಗರ್ಭಪಾತವಾಗಿದೆ.
ನವೆಂಬರ್ 9ರಂದು ಪುರಸಭೆ ಆವರಣದಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಅವರನ್ನು ಎಳೆದಾಡಿದ್ದರು. ಮೂರು ತಿಂಗಳ ಗರ್ಭಿಣಿಯಾಗಿದ್ದ ಚಾಂದಿನಿ ನೂಕಾಟ-ತಳ್ಳಾಟದ ವೇಳೆ ನೆಲಕ್ಕೆ ಬಿದ್ದು ಗಾಯಗೊಂಡಿದ್ದರು.
ಶಾಸಕ ಸಿದ್ದು ಸವದಿ ಸೇರಿದಂತೆ ಹಲವರು ಪುರಸಭೆ ಸದಸ್ಯೆಯನ್ನು ತಳ್ಳಾಡಿದ ವಿಡಿಯೋ ವೈರಲ್ ಆಗಿತ್ತಲ್ಲದೇ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಅಂದು ಗಲಾಟೆಯಲ್ಲಿ ಬಿದ್ದು ಗಾಯಗೊಂಡಿದ್ದ ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಗೆ ಇದೀಗ ಗರ್ಭಪಾತವಾಗಿದೆ ಎಂದು ತಿಳಿದುಬಂದಿದೆ.