alex Certify ಡಿಯಾಗೋ ಮರಡೋನಾ ವೈಯಕ್ತಿಕ ವೈದ್ಯರಿಗೆ ಎದುರಾಯ್ತು ಸಂಕಷ್ಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಯಾಗೋ ಮರಡೋನಾ ವೈಯಕ್ತಿಕ ವೈದ್ಯರಿಗೆ ಎದುರಾಯ್ತು ಸಂಕಷ್ಟ..!

ಫುಟ್​ಬಾಲ್​ ದಂತಕತೆ ಡಿಯಾಗೋ ಮರಡೋನಾ ಸಾವಿಗೆ ಅವರ ವೈಯಕ್ತಿಕ ವೈದ್ಯರ ನಿರ್ಲಕ್ಷ್ಯ ಆರೋಪ ಹಿನ್ನೆಲೆ ವೈದ್ಯರನ್ನ ತನಿಖೆಗೆ ಒಳಪಡಿಸಲಾಗಿದೆ.

ಡಿಯಾಗೋ ಮರಡೋನಾ ನಿಧನದಲ್ಲಿ ವೈದ್ಯರ ನಿರ್ಲಕ್ಷ್ಯ ಕಾರಣವೇ ಎಂಬುದನ್ನ ನಿರ್ಧರಿಸಲು ಪೊಲೀಸರು ಲಿಯೊಪೊಲ್ಡೋ ಲುಕ್​​ನ ಮನೆ ಹಾಗೂ ಖಾಸಗಿ ಕ್ಲಿನಿಕ್​ಗಳ ಮೇಲೆ ದಾಳಿ ನಡೆಸಿದೆ ಅಂತಾ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಮರಡೊನಾ ಕಳೆದ ಬುಧವಾರ ಬ್ಯೂನಸ್​ ಐರಿಸ್​ನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಮೆದುಳಿನಲ್ಲಿ ಹೆಪ್ಪುಗಟ್ಟಿದ್ದ ರಕ್ತ ತೆಗೆಯಲು ಮಾಡಿದ ಶಸ್ತ್ರ ಚಿಕಿತ್ಸೆ ನಡೆಸಿದ ಒಂದು ತಿಂಗಳೊಳಗೆ ಮರಡೊನಾ ಸಾವನ್ನಪ್ಪಿದ್ರು.

ಪ್ರಾಥಮಿಕ ತನಿಖೆಯಲ್ಲಿ ಮರಡೋನಾ ಪುತ್ರಿಯರಾದ ಡಾಲ್ಮಾ, ಜಿಯಾನಿನಾ ಹಾಗೂ ಹಲವರಿಂದ ಸಾಕ್ಷ್ಯ ಕಲೆ ಹಾಕಿದ ಬಳಿಕ ನ್ಯಾಯಾಧೀಶರು ವೈದ್ಯರ ನಿವಾಸ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಲು ಆದೇಶಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...