2021ರ ಮೊದಲ ಭಾಗದಲ್ಲಿ ಕೊರೊನಾ ಲಸಿಕೆ ಕುರಿತಾದ ಸ್ಪಷ್ಟ ಚಿತ್ರಣ ಹೊರಬೀಳಲಿದೆ ಎಂದಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ದನ್ ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ.
ಮುಂದಿನ ವರ್ಷದ ಜೂನ್ – ಜುಲೈ ವೇಳೆ ದೇಶದ ಸುಮಾರು 30 ಕೋಟಿ ಮಂದಿಗೆ ವೈಜ್ಞಾನಿಕವಾಗಿ ಅನುಮೋದನೆ ಪಡೆದ, ಸುರಕ್ಷಿತ ಹಾಗೂ ಪರಿಣಾಮಕಾರಿ ಲಸಿಕೆ ಸಿಗಲಿದೆ ಎಂದು ಹೇಳಿದ್ದಾರೆ.
ಲಸಿಕೆಗಳ ಉತ್ಪಾದನೆಯಲ್ಲಿ ಭಾರತದ ಸಾಮರ್ಥ್ಯ ಏನೆಂಬುದು ವಿಶ್ವಕ್ಕೇ ತಿಳಿದಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅವಶ್ಯವಿರುವ ಲಸಿಕೆ ಪ್ರಮಾಣದಲ್ಲಿ 60 ಪ್ರತಿಶತವನ್ನ ನಾವು ಒದಗಿಸುತ್ತೇವೆ. ಕೋವಿಡ್ 19 ಲಸಿಕೆಗಾಗಿ ವಿಶ್ವದ ಅನೇಕ ರಾಷ್ಟ್ರಗಳು ಸಂಶೋಧನೆ ನಡೆಸುತ್ತಲೇ ಇವೆ. ಈಗಾಗಲೇ ಅನೇಕ ಲಸಿಕೆಗಳು ಕ್ಲಿನಿಕಲ್ ಪ್ರಯೋಗದಲ್ಲಿ ಯಶಸ್ಸಿನ ಪಥದಲ್ಲಿ ಸಾಗುತ್ತಿವೆ. ಭಾರತದಲ್ಲಿ ಲಸಿಕೆ ಪೂರ್ವಭಾವಿ ಪ್ರಯೋಗ ಹಂತದಲ್ಲಿದೆ. ಸದ್ಯ ಇರುವ ಮಾಹಿತಿಯ ಪ್ರಕಾರ, ಮುಂದಿನ ವರ್ಷದ ಆರಂಭದಲ್ಲೇ ಲಸಿಕೆ ದೊರೆಯುತ್ತದೆ ಎಂದು ನಾನು ನಂಬಿದ್ದೇನೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೇಳಿದ್ರು.