ಕೋವಿಡ್-19 ವೈರಸ್ನಿಂದ ಜಗತ್ತಿನೆಲ್ಲೆಡೆ ಬಹುತೇಕ ಚಟುವಟಿಕೆಗಳು ಸ್ಥಬ್ದಗೊಂಡಿವೆ. ಇದಕ್ಕೆ ಯೂರೋಪ್ನ ಜವಾಟೆಲ್ಲಿ ಸರ್ಕಸ್ ಹೊರತಲ್ಲ.
ಫ್ರೆಂಚ್ ಕುಟುಂಬವೊಂದು ನಡೆಸಿಕೊಂಡು ಹೋಗುತ್ತಿರುವ ಈ ಸರ್ಕಸ್ ಕಂಪನಿಯು ಯೂರೋಪ್ನಾದ್ಯಂತ ಸಂಚರಿಸುತ್ತಾ ಪ್ರದರ್ಶನಗಳನ್ನು ನಡೆಸಿಕೊಂಡು ಹೋಗುತ್ತದೆ. ಇದೀಗ ದಕ್ಷಿಣ ಬೆಲ್ಜಿಯಂನ ಗೆಮ್ಬ್ಲೌ ಎಂಬ ಪಟ್ಟಣದಲ್ಲಿ ಬೀಡು ಬಿಟ್ಟಿದೆ ಈ ಸರ್ಕಸ್ ಕಂಪನಿ.
ವೈರಸ್ ಕಾರಣದಿಂದ ತಿಂಗಳುಗಟ್ಟಲೇ ಇಲ್ಲೇ ಉಳಿದುಕೊಂಡಿರುವ ಸರ್ಕಸ್ ಕಂಪನಿ, ತನ್ನ ಬಳಿ ಇರುವ ಪ್ರಾಣಿಗಳಿಗೆ ಆಹಾರ ಪೂರೈಸಲು ನಿಧಿ ಸಂಗ್ರಹಣೆ ಮಾಡುತ್ತಿದೆ.
600 ಮಂದಿಗೆ ಆಗುವಷ್ಟು ಶಾಮಿಯಾನ ಹಾಕಿಕೊಳ್ಳುವ ಈ ಸರ್ಕಸ್ ಕಂಪನಿ ಯೂರೋಪ್ನ 30 ವಿವಿಧ ಪಟ್ಟಣಗಳಲ್ಲಿ ಪ್ರತಿ ವರ್ಷ ಪ್ರದರ್ಶನ ಹಮ್ಮಿಕೊಳ್ಳುತ್ತದೆ. ಕೋವಿಡ್-19 ಕೇಸುಗಳು ವಿಪರೀತ ಏರಿಕೆಯಾಗುತ್ತಿರುವ ಕಾರಣದಿಂದ ಮಾರ್ಚ್ನಿಂದಲೂ ಈ ಕಂಪನಿ ಎಲ್ಲೂ ಹೋಗಲು ಸಾಧ್ಯವಾಗುತ್ತಿಲ್ಲ.