ದೆಹಲಿ: ಇನ್ನು 2 ಲಕ್ಷ ರೂ. ಮೇಲೆ ನಗದು ಪಾವತಿಸಿದರೆ ದಂಡ ಕಟ್ಟಬೇಕು.
ಸೆಕ್ಷನ್ 269ST, ಆದಾಯ ತೆರಿಗೆ ಇಲಾಖೆ ಪ್ರಕಾರ ಇನ್ನೂ ಮುಂದೆ ಎರಡು ಲಕ್ಷ ಮತ್ತು ಮೇಲ್ಪಟ್ಟ ನಗದು ಒಂದೇ ದಿನದಲ್ಲಿ ಸ್ವೀಕರಿಸಿದರೆ ಅದರ ನೂರು ಶೇಕಡ ದಂಡ ಪಾವತಿಸಬೇಕಾಗುತ್ತದೆ.
ನೆಫ್ಟ್, ಯೂಪಿಐ, ಬ್ಯಾಂಕ್ ಡ್ರಾಫ್ಟ್, ಆಧಾರ್ ಪೇ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಚೆಕ್, ಇಸಿಎಸ್, ಸಿಎಂಪಿಎಸ್, ಆರ್ಟಿಜಿಎಸ್, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿದರೆ ಯಾವುದೇ ದಂಡ ಇರುವುದಿಲ್ಲ. ಸಮಂಜಸವಾದ ಕಾರಣ ಇದ್ದರೆ ಮಾತ್ರ ದಂಡದಿಂದ ಬಚಾವಾಗಬಹುದಾಗಿದೆ.