ಬೆಂಗಳೂರು: ಕೊರೋನಾ ವ್ಯಾಕ್ಸಿನ್ ಕೊಡಿಸಲು ಟೂರಿಸ್ಟ್ ಸಂಸ್ಥೆಗಳಿಂದ ಪ್ಯಾಕೆಜ್ ಘೋಷಿಸಿ ಭರ್ಜರಿ ಆಫರ್ ನೀಡಲಾಗಿದೆ.
4 ದಿನ 4 ಹಗಲು ಅಮೆರಿಕ ಪ್ರವಾಸದಲ್ಲಿ ಸ್ಟಾರ್ ಡಿಲಕ್ಸ್ ಹೋಟೆಲ್ ನಲ್ಲಿ ವಸತಿ, ಊಟ, ಪ್ರಯಾಣ ವ್ಯವಸ್ಥೆ ಮಾಡಲಾಗುತ್ತದೆ. ಜೊತೆಗೆ ಕೊರೋನಾ ಲಸಿಕೆ ಕೂಡ ನೀಡಲಾಗುವುದು.
ವ್ಯಾಕ್ಸಿನ್ ಪ್ರವಾಸಕ್ಕೆ ತೆರಳುವವರಿಗೆ ಅಮೆರಿಕ ಟೂರ್ ಪ್ಯಾಕೇಜ್ ಘೋಷಿಸಿದ್ದು, ಏರ್ಪೋರ್ಟ್ ನಿಂದ ಟ್ರಾನ್ ಪೋರ್ಟ್ ಸೌಲಭ್ಯಗಳ ಜೊತೆಗೆ ಒಂದು ಡೋಸ್ ಕೋವಿಡ್ ವ್ಯಾಕ್ಸಿನ್ ನೀಡಲಾಗುವುದು. ಈ ಸ್ಪೆಷಲ್ ಆಫರ್ ವ್ಯಾಕ್ಸಿನ್ ಪಡೆಯಲು ಕಡ್ಡಾಯವಾಗಿ ಅಮೆರಿಕ ವೀಸಾ ಆಗಿರಬೇಕು. ಅಮೆರಿಕ ಲಸಿಕೆ ಟೂರ್ ಖರ್ಚು 1.50 ಲಕ್ಷ ರೂಪಾಯಿ ನಿಗದಿಪಡಿಸಲಾಗಿದೆ.
ಆಫರ್ ನೀಡಿ ಬುಕಿಂಗ್ ಗೆ ಮುಂದಾದ ಟೂರಿಸ್ಟ್ ಸಂಸ್ಥೆಗಳು ಕೊರೋನಾ ಲಸಿಕೆಯೊಂದಿಗೆ ಲಾಭ ಮಾಡಿಕೊಳ್ಳಲು ಪ್ಲಾನ್ ಮಾಡಿಕೊಂಡಿವೆ. ಕೊರೋನಾ ಮಹಾಮಾರಿ ಅಟ್ಟಹಾಸಕ್ಕೆ ಇಡಿ ವಿಶ್ವವೇ ತತ್ತರಿಸಿ ಹೋಗಿದೆ. ಕೊರೋನಾ ವ್ಯಾಕ್ಸಿನ್ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಅಮೆರಿಕ ಸರ್ಕಾರದ ಅನುಮತಿ ಸಿಕ್ಕಲ್ಲಿ ಡಿಸೆಂಬರ್ 2 ನೇ ವಾರದಿಂದ ಲಸಿಕೆ ನೀಡಲಾಗುವುದು. ಇದಕ್ಕೆ ಪೂರಕವಾಗಿ ಪ್ಲಾನ್ ಮಾಡಿಕೊಂಡಿರುವ ಟೂರಿಸ್ಟ್ ಸಂಸ್ಥೆಗಳು ವ್ಯಾಕ್ಸಿನ್ ಜೊತೆಗೆ ಪ್ರವಾಸ ಪ್ಯಾಕೇಜ್ ಆಫರ್ ನೀಡಿವೆ ಎಂದು ಹೇಳಲಾಗಿದೆ.