ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಐಫೋನ್-12 ಪ್ರೋ ಬೆಲೆ 1,19,900 ರೂಗಳಷ್ಟಿದೆ. ಈ ಫೋನ್ಗಳು ನಿಜಕ್ಕೂ ಇಷ್ಟೆಲ್ಲಾ ದುಬಾರಿಯಾಗುವ ವಸ್ತುಗಳಿಂದ ಮಾಡಲ್ಪಟ್ಟಿವೆಯೇ ಎಂಬ ಜಿಜ್ಞಾಸೆ ಸಾಕಷ್ಟು ಮಂದಿಗೆ ಇದೆ.
ಇದೇ ವಿಚಾರವಾಗಿ ಅಧ್ಯಯನವೊಂದನ್ನು ಮಾಡಿರುವ ಜಪಾನ್ನ ಫೋಮಾಲ್ಹೌಟ್ ಟೆಕ್ನೋ ಸಲ್ಯೂಷನ್ಸ್, ಐಫೋನ್ನ ತಯಾರಿಕೆಯ ವಾಸ್ತವಿಕ ಬೆಲೆಯ ಬಗ್ಗೆ ತಿಳಿಸಿದೆ.
ಐಫೋನ್-12 ಪ್ರೋ ತಯಾರಿಸಲು ಬಳಸಲಾದ ಬಿಡಿ ಭಾಗಗಳ ಒಟ್ಟು ಬೆಲೆ 30,000 ರೂ.ಗಳಷ್ಟು ಮಾತ್ರವೇ ಎಂದು ವರದಿಯಿಂದ ತಿಳಿದುಬಂದಿದೆ.
ಈ ಫೋನ್ನಲ್ಲಿ ಬಳಸಲಾಗುವ ಕ್ವಾಲ್ಕಾಂ ಎಕ್ಸ್5 5ಜಿ ಮೋಡೆಮ್ (6700 ರೂ.ಗಳು) ಅತ್ಯಂತ ದುಬಾರಿಯಾದ ಬಿಡಿಭಾಗವಾಗಿದ್ದು, ನಂತರದ ಸ್ಥಾನದಲ್ಲಿ ಒಎಲ್ಇಡಿ ಡಿಸ್ಪ್ಲೇಗಳು (5,200 ರೂ.ಗಳು) ಇವೆ. ಆಪಲ್ನ ಅ14 ಬಯಾನಿಕ್ ಚಿಪ್ಸೆಟ್ಗೆ 3000 ರೂ.ಗಳು ತಗುಲಿದರೆ, ರ್ಯಾಮ್ ಮಾಡ್ಯೂಲ್ಗೆ 950 ರೂ.ಗಳು, ಫ್ಲಾಶ್ ಮೆಮೋರಿಗೆ 550 ರೂ.ಗಳು ಹಾಗೂ ಸೋನಿ ಕ್ಯಾಮೆರಾಗೆ 600 ರೂ.ಗಳಷ್ಟು ಖರ್ಚಾಗುತ್ತಿದೆ ಎಂದು ವರದಿ ತಿಳಿಸಿದೆ.
ಇದೇ ಮಾಡೆಲ್ನ ಐಫೋನ್ ಅಮೆರಿಕದ ಮಾರುಕಟ್ಟೆಯಲ್ಲಿ $999ಗಳಿಗೆ ಮಾರಾಟವಾಗುತ್ತಿವೆ.
ಮೇಲ್ಕಂಡ ಲೆಕ್ಕಾಚಾರದಲ್ಲಿ ಹೋದರೆ, ಐಫೋನ್ 12ಗೆ ಉತ್ಪಾದನಾ ವೆಚ್ಚ 27,500 ರೂ.ಗಳಾದರೆ ಅವುಗಳನ್ನು ಭಾರತದಲ್ಲಿ 79,900 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.