ಹವಾಮಾನದಲ್ಲಿ ಬದಲಾವಣೆ ಆಗಿರುವ ಕಾರಣ ಮುಂಬರುವ ವರ್ಷಗಳಲ್ಲಿ ಮರಗಳು ಅವಧಿಗೂ ಮುನ್ನವೇ ತಮ್ಮ ಎಲೆಗಳನ್ನು ಉದುರಿಸಿಕೊಳ್ಳಲಿವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಮರಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಾ, ಕೇಸರಿ/ಕೆಂಪು ಬಣ್ಣಕ್ಕೆ ತಿರುಗಿದಂತೆ ಅವುಗಳು ಇಂಗಾಲದ ಡೈ ಆಕ್ಸೈಡ್ ಹೀರಿಕೊಳ್ಳುವ ಕ್ಷಮತೆ ಕಡಿಮೆಯಾಗಿ ದ್ಯುತಿ ಸಂಶ್ಲೇಷಣಾ ಕ್ರಿಯೆ ಮೂಲಕ ಸಸಿಯ ಬೆಳವಣಿಗೆಗೆ ಪೂರಕವಾದ ಪೋಷಕಾಂಶಗಳನ್ನು ಹೀರಿಕೊಳ್ಳಲು ವಿಫಲವಾಗುತ್ತವೆ. ಯೂರೋಪ್ ಖಂಡದಲ್ಲಿರುವ ಗಿಡ/ಮರಗಳಲ್ಲಿ ಹೊಸ ಎಲೆಗಳು ನಿಗದಿತ ಅವಧಿಗಿಂತ ಎರಡು ವಾರಗಳ ಮುನ್ನವೇ ಚಿಗುರುತ್ತಿವೆ.
ವಸಂತ ಋತು ದೀರ್ಘವಾದಷ್ಟು ಶರತ್ಕಾಲವು ಇನ್ನಷ್ಟು ಬಿಸಿಯಾಗುತ್ತದೆ ಎಂದು ಹಿಂದಿನ ನಂಬಿಕೆಗಳು ಸೂಚಿಸುತ್ತಿದ್ದವು. ಆದರೆ ಜರ್ನಲ್ ಸೈನ್ಸ್‌ನಲ್ಲಿ ಪ್ರಕಟವಾದ ಇತ್ತೀಚಿನ ವರದಿಯೊಂದು ಇದಕ್ಕೆ ವ್ಯತಿರಿಕ್ತವಾದದ್ದನ್ನು ಹೇಳುತ್ತಿದೆ.