ಹೆಚ್ಚುತ್ತಿರುವ ಕೊರೊನಾ ಕೇಸ್ಗಳ ನಡುವೆ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಜಬುವಾ ಜಿಲ್ಲೆಯಲ್ಲಿ ಕಪ್ಪು ಬಣ್ಣದ ಕೋಳಿ ಕಡಕ್ನಾಥ್ಗೆ ಬೇಡಿಕೆ ಹೆಚ್ಚಾಗಿದೆ.
ಸರ್ಕಾರಿ ಅಧಿಕಾರಿಗಳು ಹೇಳುವ ಮಾಹಿತಿ ಪ್ರಕಾರ, ಕೊರೊನಾದಿಂದಾಗಿ ಈ ಕೋಳಿಗೆ ಬೇಡಿಕೆ ಹೆಚ್ಚಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಕುಕ್ಕುಟೋದ್ಯಮ ಭಾರೀ ನಷ್ಟದಲ್ಲಿತ್ತು. ಆದರೆ ಅನ್ಲಾಕ್ ಜಾರಿಯಾದಾಗಿನಿಂದ ಕಪ್ಪು ಕೋಳಿಗೆ ಬೇಡಿಕೆ ಹೆಚ್ಚಾಗಿದೆಯಂತೆ.
ಈ ಕೋಳಿ ಮಾಂಸದಲ್ಲಿ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುವ ಅಂಶ ಅಧಿಕ ಪ್ರಮಾಣದಲ್ಲಿದೆ. ಅದು ಮಾತ್ರವಲ್ಲದೇ ಕಡಿಮೆ ಕೊಬ್ಬು. ಅಧಿಕ ಪ್ರೋಟೀನ್ ಇರೋದ್ರಿಂದ ಹೃದಯ, ಉಸಿರಾಟ ಹಾಗೂ ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ ಇದು ಪ್ರಯೋಜನಕಾರಿಯಾಗಿದೆ.
ಮಧ್ಯ ಪ್ರಕಾಶ ಸರ್ಕಾರ ಕೂಡ ಕಪ್ಪು ಕೋಳಿ ಉದ್ಯಮ ಇನ್ನಷ್ಟು ಬಲಪಡಿಸಲು ಹಲವು ಕ್ರಮಗಳನ್ನ ಕೈಗೊಂಡಿದೆ.