ಇಟಾಲಿಯನ್ ಐಷಾರಾಮಿ ಬ್ರ್ಯಾಂಡ್ಗಳಲ್ಲೊಂದಾದ ಬೋರಿನಿ ಮಿಲನೇಸಿ 52 ಕೋಟಿ ರೂಪಾಯಿ ಮೌಲ್ಯದ ವಿಶೇಷವಾದ ಅತ್ಯಂತ ದುಬಾರಿ ಮೌಲ್ಯದ ಹ್ಯಾಂಡ್ ಬ್ಯಾಗ್ನ್ನ ಅನಾವರಣಗೊಳಿಸಿದೆ.
ಬೊಲೊಗ್ನಾ ಮೂಲದ ಈ ಬ್ರ್ಯಾಂಡ್ ಕೇವಲ ಮೂರು ಐಷಾರಾಮಿ ಪರ್ವಾ ಮೀ ಬ್ಯಾಗ್ಗಳನ್ನ ಉತ್ಪಾದನೆ ಮಾಡುತ್ತೆ.
ಪ್ರತಿ ಚೀಲವನ್ನ ತಯಾರಿಸಲು 1 ಸಾವಿರ ಗಂಟೆಗಳ ಸಮಯ ಬೇಕಾಗುತ್ತೆ ಅಂತಾ ವರದಿಗಳು ಹೇಳಿವೆ, ಇನ್ನು ತಮ್ಮ ದುಬಾರಿ ಬ್ಯಾಗ್ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಈ ಕಂಪನಿ, ಬ್ಯಾಗ್ ಮಾರಾಟ ಮೊತ್ತದ ಒಂದು ಭಾಗವನ್ನ ಸಮುದ್ರಗಳನ್ನ ಸ್ವಚ್ಛಗೊಳಿಸಲು ದೇಣಿಗೆ ನೀಡಲಾಗುವುದು ಎಂದು ಹೇಳಿದೆ.
ಈ ಬ್ಯಾಗ್ನ್ನ ಅನಾವರಣಗೊಳಿಸುತ್ತಿರೋದಕ್ಕೆ ಹೆಮ್ಮೆಯಾಗುತ್ತಿದೆ. ಸಮುದ್ರ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಬ್ಯಾಗ್ಗಳ ಮಾರಾಟದಿಂದ ಬಂದ ಆದಾಯದಲ್ಲಿ 800 ಸಾವಿರ ಯುರೋಗಳನ್ನ ಸಮುದ್ರ ಸ್ವಚ್ಛತೆಗೆ ನೀಡಲಿದ್ದೇವೆ ಎಂದು ಕಂಪನಿ ಹೇಳಿದೆ.
ಮೊಸಳೆ ಚರ್ಮದಿಂದ ಮಾಡಲ್ಪಟ್ಟಿರುವ ಈ ಬ್ಯಾಗ್ ಸ್ವಲ್ಪ ಪ್ರಮಾಣದಲ್ಲಿ ಹೊಳಪನ್ನ ಹೊಂದಿದೆ. ಈ ಬ್ಯಾಗ್ ಮೇಲೆ ಚಿನ್ನದ ಚಿಟ್ಟೆಗಳನ್ನ ಇರಿಸಲಾಗಿದ್ದು, ಡೈಮಂಡ್ಗಳಿಂದ ಅದರ ರೆಕ್ಕೆಗಳನ್ನ ಅಲಂಕರಿಸಲಾಗಿದೆ.
https://www.instagram.com/p/CIDwFxZqM77/?utm_source=ig_web_copy_link