ಗಿನ್ನೆಸ್ ವಿಶ್ವ ದಾಖಲೆ ಮಾಡೋದು ಅಂದರೆ ಸುಲಭದ ಕೆಲಸವಲ್ಲ. ಕೆಲವೊಂದು ವಿಶ್ವ ದಾಖಲೆಯಂತೂ ಸಿಕ್ಕಾಪಟ್ಟೆ ವಿಚಿತ್ರವಾಗಿರುತ್ತೆ.
ಈ ಮಾತಿಗೆ ಸಾಕ್ಷಿ ಎಂಬಂತೆ ಇಥಿಯೋಪಿಯಾದಲ್ಲಿ ಕಿರುಬೆಲ್ ಯಿಲ್ಮಾ ಎಂಬಾತ ಬಾಯಲ್ಲಿ ನೀರು ತುಂಬಿಕೊಂಡು ಅತಿ ಹೆಚ್ಚು ಸಮಯಗಳ ಉಗಿಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾನೆ.
ಈತ ತನ್ನ ಬಾಯಿಯಿಂದ 56.36 ಸೆಕೆಂಡ್ಗಳಷ್ಟು ಸಮಯ ನೀರನ್ನ ಮೇಲಕ್ಕೆ ತುಪ್ಪಿದ್ದಾನೆ.
ಸೆಪ್ಟೆಂಬರ್ 22 ,2016ರಂದು ದಾಖಲೆ ನಿರ್ಮಿಸಿದ ವಿಡಿಯೋವನ್ನ ಗಿನ್ನೆಸ್ ವಿಶ್ವದಾಖಲೆ ತನ್ನ ಅಧಿಕೃತ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಮತ್ತೊಮ್ಮೆ ಹಂಚಿಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯ ಹೊರಹಾಕಿದ್ದಾರೆ.
https://www.instagram.com/p/CIDd7J3BOEn/?utm_source=ig_web_copy_link