ಇಂದು ಆರ್ಮುಗಂ ಖ್ಯಾತಿಯ ರವಿಶಂಕರ್ ತಮ್ಮ 54ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ‘ಕೆಂಪೇಗೌಡ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರವಿಶಂಕರ್ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ವಿಲನ್ ಹಾಗೂ ಹಾಸ್ಯ ಕಲಾವಿದನಾಗಿ ಮತ್ತು ಪೋಷಕ ಪಾತ್ರದಲ್ಲೂ ಕೂಡ ನಟಿಸಿ ರವಿಶಂಕರ್ ಸೈ ಎನಿಸಿಕೊಂಡಿದ್ದಾರೆ.
ಇಂದು ರವಿಶಂಕರ್ ಅವರ ಹುಟ್ಟುಹಬ್ಬದ ಪ್ರಯುಕ್ತ ‘ತಲ್ವಾರ್ ಪೇಟೆ’ ಸಿನಿಮಾ ಚಿತ್ರತಂಡ ರವಿಶಂಕರ್ ಅವರ ಲುಕ್ ರಿವೀಲ್ ಮಾಡಿದ್ದು ಈ ಚಿತ್ರದಲ್ಲಿ ಸೀರಿಯಲ್ ಸೆಟ್ ಚಂದ್ರಪ್ಪ ಎಂಬ ಪಾತ್ರದಲ್ಲಿ ರವಿಶಂಕರ್ ಅಭಿನಯಿಸುತ್ತಿದ್ದಾರೆ.
ರವಿಶಂಕರ್ 1966 ನವೆಂಬರ್ 28ರಂದು ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.