ಪ್ರತಿಭಟನೆಯ ವೇಳೆ ಪೊಲೀಸ್ ಠಾಣೆಗೆ ಮೊಟ್ಟೆ ಎಸೆದಾತನಿಗೆ 21 ತಿಂಗಳ ಜೈಲು ಶಿಕ್ಷೆ ವಿಧಿಸಿ ಹಾಂಕಾಂಗ್ ಕೋರ್ಟ್ ತೀರ್ಪು ನೀಡಿದೆ.
ಕಳೆದ ವರ್ಷ ಜುಲೈ ತಿಂಗಳಲ್ಲಿ ಸಂಪೂರ್ಣ ಪ್ರಜಾಪ್ರಭುತ್ವದ ಪರವಾಗಿ ಪ್ರತಿಭಟನೆ ನಡೆದ ಸಂದರ್ಭದಲ್ಲಿ 31 ವರ್ಷದ ಚುನ್ – ಹೋ- ಉನ್ ಎಂಬ ವ್ಯಕ್ತಿ ಠಾಣೆಗೆ ಮೊಟ್ಟೆ ಹೊಡೆದಿದ್ದ.
ಆತನ ವಿರುದ್ಧ ಪೊಲೀಸರು ಕರ್ತವ್ಯಕ್ಕೆ ಅಡ್ಡಿ, ಅನಧಿಕೃತವಾಗಿ ಗುಂಪು ಸೇರಿದ್ದು ಸೇರಿ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದರು.
ಮೊಟ್ಟೆ ಒಂದು ಮಾರಕಾಸ್ತ್ರವಲ್ಲ. ಆದರೆ, ಸರ್ಕಾರಿ ಕರ್ತವ್ಯ ಮಾಡುವವರಿಗೆ ರಕ್ಷಣೆ ನೀಡುವುದು, ಕಾನೂನನ್ನು ರಕ್ಷಿಸುವುದು ನ್ಯಾಯಾಲಯದ ಕೆಲಸ ಎಂದು ಶಿಕ್ಷೆ ನೀಡುವುದಕ್ಕೂ ಪೂರ್ವದಲ್ಲಿ ನ್ಯಾಯಾಧೀಶ ವಿನ್ನೆನ್ ಲು ಹೇಳಿದ್ದಾರೆ.