ಕೋವಿಡ್-19 ಸಾಂಕ್ರಮಿಕದ ನಡುವೆಯೂ ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯದಲ್ಲಿರುವ ಆರು ವಿವಿಧ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 45 ಲಕ್ಷ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳನ್ನು ವಿತರಿಸಿದೆ ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾರ್ಷಿಕ ಎರಡು ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯವಿರುವ ಕುಟುಂಬಗಳಿಗೆ ಸೇರಿದ, ಹಿಂದಿನ ವರ್ಷದ ಪರೀಕ್ಷೆಗಳಲ್ಲಿ ಕನಿಷ್ಠ 60 ಪ್ರತಿಶತದಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್ ಕೊಡಲಾಗುತ್ತಿದೆ ಎಂದು ಪ.ಬಂಗಾಳ ಅಲ್ಪಸಂಖ್ಯಾತರ ಇಲಾಖೆಯ ಚೇರ್ಮನ್ ಪಿ.ಬಿ. ಸಲೀಂ ತಿಳಿಸಿದ್ದಾರೆ.
ಹೀಗೆ ಆಯ್ಕೆಗೊಂಡ ಪ್ರತಿಯೊಬ್ಬ ಫಲಾನುಭವಿಯ ಬ್ಯಾಂಕ್ ಖಾತೆಗೂ 1,500-60,000 ರೂ.ಗಳವರೆಗೂ ಬೇರೆ ಬೇರೆ ರೇಂಜ್‌ಗಳಲ್ಲಿ ವಿದ್ಯಾರ್ಥಿ ವೇತನ ನೀಡುವ ವ್ಯವಸ್ಥೆಯನ್ನು ಅಲ್ಲಿನ ಸರ್ಕಾರ ಮಾಡಿಕೊಂಡಿದೆ.