alex Certify ’ಮೃತಪಟ್ಟ’ ಮೂರು ಗಂಟೆಗಳ ಬಳಿಕ ಸಿಕ್ತು ಪುನರ್ಜನ್ಮ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಮೃತಪಟ್ಟ’ ಮೂರು ಗಂಟೆಗಳ ಬಳಿಕ ಸಿಕ್ತು ಪುನರ್ಜನ್ಮ…!

2020 ಬಹಳಷ್ಟು ಅಸಹಜ ಘಟನಾವಳಿಗಳನ್ನು ಒಳಗೊಂಡ ವರ್ಷವಾಗಿದೆ. ಯಾವ ಮಟ್ಟಿಗೆ ಎಂದರೆ ಮೃತಪಟ್ಟರು ಎಂದುಕೊಂಡ ವ್ಯಕ್ತಿಗಳು ಚಿತೆಯಿಂದ ಎದ್ದೇಳುವ ಮಟ್ಟಿಗೆ..!

ಕೀನ್ಯಾದ ವ್ಯಕ್ತಿಯೊಬ್ಬರು ಸತ್ತಿದ್ದಾರೆ ಎಂದುಕೊಂಡು ಅವರ ಅಂತಿಮ ಸಂಸ್ಕಾರ ಆರಂಭಿಸಿದ ಮೂರು ಗಂಟೆಗಳ ಬಳಿಕ ಎದ್ದು ಬಂದಿದ್ದಾರೆ. 32 ವರ್ಷದ ಪೀಟರ್‌ ಕಿಗೆನ್ ಹೆಸರಿನ ಈ ವ್ಯಕ್ತಿ ಮನೆಯಲ್ಲಿ ಕುಸಿದು ಬಿದ್ದ ಬಳಿಕ ಇಲ್ಲಿನ ಕಪ್ಕಾಟೆಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಆಸ್ಪತ್ರೆಗೆ ಬರುವಾಗಲೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯಲ್ಲಿ ಘೋಷಿಸಲಾಗಿತ್ತು.

ಇದಾದ ಬೆನ್ನಿಗೆ ಪೀಟರ್‌ರನ್ನು ಸ್ಮಶಾನಕ್ಕೆ ಹೊತ್ತೊಯ್ಯಲಾಯಿತು. ಆತನ ದೇಹವನ್ನು ಹೂಳಲು ಅಲ್ಲಿನ ಸಿಬ್ಬಂದಿ ಕೆಲಸ ಮಾಡುತ್ತಿರುವಾಗಲೇ ಆತ ಎದ್ದು ಕುಳಿತಿದ್ದಾರೆ.

ತನಗೆ ಪ್ರಜ್ಞೆ ತಪ್ಪಿದ್ದ ಕಾರಣದಿಂದ ಇವೆಲ್ಲಾ ಗೊತ್ತೇ ಆಗಲಿಲ್ಲ ಎಂದು ಖುದ್ದು ಪೀಟರ್‌ ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...