alex Certify ಜಾಕ್​ಪಾಟ್​ ಲಾಟರಿ ಮಾರಿದ್ದಕ್ಕೆ ಬಂದ ಹಣದಲ್ಲಿ ಒಂದೊಳ್ಳೆ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಕ್​ಪಾಟ್​ ಲಾಟರಿ ಮಾರಿದ್ದಕ್ಕೆ ಬಂದ ಹಣದಲ್ಲಿ ಒಂದೊಳ್ಳೆ ಕಾರ್ಯ

ದೊಡ್ಡ ಮೊತ್ತದ ಲಾಟರಿ ಗೆಲ್ಲಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ. ಎಷ್ಟೋ ಜನ ಈ ಕನಸನ್ನ ಕಾಣ್ತಿರೋ ನಡುವೆಯೇ ಅಮೆರಿಕದ ನಿವಾಸಿಯಾದ ದಕ್ಷಿಣ ಕ್ಯಾರೋಲಿನಾದ ಮಹಿಳೆ ಬರೋಬ್ಬರಿ 26,097,905.69 ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದಾರೆ.

ಆದರೆ ಅದನ್ನ ಮಾರಾಟ ಮಾಡಿದ ಅಂಗಡಿಯು ಜನತೆಗೆ ಭೋಜನಕೂಟ ಏರ್ಪಡಿಸುವ ಮೂಲಕ ಜನರ ಹೃದಯಗಳನ್ನ ಗೆಲ್ಲುತ್ತಿದೆ.

ಆಂಡರ್ಸನ್ನಲ್ಲಿರುವುವ ಕೆಪಿ ಫುಡ್​ ಮಾರ್ಟ್ ಎಂಬ ಸ್ಥಳೀಯ ಅಂಗಡಿ ವಿಜೇತ ಲಾಟರಿಯನ್ನ ಮಾರಾಟ ಮಾಡಿದೆ. ಲಾಟರಿ ಮಾರಾಟದಿಂದ ಬಂದ ಹಣದಿಂದ ಗ್ರಾಹಕರಿಗೆ ಭೋಜನ ಕೂಟ ಏರ್ಪಡಿಸಿದೆ.

ಅಂದಹಾಗೆ ಈ ಭೋಜನಕೂಟವನ್ನ ವಿಶೇಷವಾಗಿ ನಿರಾಶ್ರಿತರಿಗೆ ನೀಡಲಾಗಿದೆ. ಅಂಗಡಿ ವ್ಯವಸ್ಥಾಪಕ ಅಗ್ಗಿ ತರ್ನೋವ್ಸ್ಕಿ ನಿರಾಶ್ರಿತರಿಗೆ ಎಂದು ಟರ್ಕಿಯ ಸಾಂಪ್ರದಾಯಿಕ ಆಹಾರವನ್ನ ತಯಾರು ಮಾಡಿದ್ದೇವೆ ಎಂದು ಹೇಳಿದ್ದಾರೆ.

ವಿಜೇತ ಲಾಟರಿಗಾಗಿ ಈ ಅಂಗಡಿಯು 2,59,069.48 ರೂಪಾಯಿ ಪಡೆದಿದೆ. ಇದೇ ಗಳಿಕೆಯ ಹಣದಿಂದ ಜನತೆಗೆ ಭೋಜನ ಕೂಟ ಏರ್ಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...