ವಾಹನಗಳ ಮಾಲೀಕತ್ವ ವರ್ಗಾವಣೆಯನ್ನ ಇನ್ನಷ್ಟು ಸುಗಮವಾಗಿಸಲು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಕೇಂದ್ರ ಮೋಟಾರು ವಾಹನ ಕಾಯ್ದೆ 1989ರಲ್ಲಿ ಕೆಲ ತಿದ್ದುಪಡಿ ಮಾಡಲು ಪ್ರಸ್ತಾವನೆ ಸಲ್ಲಿಸಿದೆ.
ಇದಕ್ಕೆ ಸಂಬಂಧಿಸಿ ಕರಡು ಸೂಚನೆಯನ್ನ ಸಾರಿಗೆ ಸಚಿವಾಲಯ ಗುರುವಾರ ಪ್ರಕಟಿಸಿದೆ. ವಾಹನಗಳ ನೋಂದಣಿ ಸಂದರ್ಭದಲ್ಲಿ ನಾಮನಿರ್ದೇಶನ ಸೌಲಭ್ಯ ಸೇರಿಸಲು ಪ್ರಸ್ತಾಪಿಸಲಾಗಿದೆ.
ಆದರೆ ಆನ್ಲೈನ್ ಅರ್ಜಿ ಮೂಲಕ ನಾಮಿನಿ ಹೆಸರನ್ನ ಸೇರಿಸಬಹುದು. ವಾಹನ ಮಾಲೀಕರು ಸಾವಿಗೀಡಾದ ಸಂದರ್ಭದಲ್ಲಿ ನಾಮಿನಿ ಹೆಸರಿಗೆ ವಾಹನ ವರ್ಗಾಯಿಸಲು ಇದು ಸಹಾಯ ಮಾಡುತ್ತದೆ.
ಮೋಟಾರು ವಾಹನದ ನಾಮಿನಿ ಸಾವಿಗೀಡಾದ ಸಂದರ್ಭದಲ್ಲಿ ವಾಹನದ ಕಾನೂನು ಬದ್ಧ ಉತ್ತರಾಧಿಕಾರಿಯಾಗಬೇಕೆನ್ನುವ ವ್ಯಕ್ತಿ ಐಡೆಂಟಿಟಿ ಕಾರ್ಡ್ನ್ನ ಪ್ರಸ್ತುತ ಪಡಿಸಬೇಕು.