ದಿವಂಗತರಾದ ತಮ್ಮ ಹೆತ್ತವರ ಕುರಿತು ಮಾತನಾಡಿರುವ ಬಾಲಿವುಡ್ ನಟ ಶಾರುಖ್ ಖಾನ್, ಬಹಳಷ್ಟು ಸಂದರ್ಭಗಳಲ್ಲಿ ಅವರನ್ನು ತಾವು ಹೇಗೆ ನೆನೆಯುತ್ತಾರೆ ಎಂದು ಹೇಳಿಕೊಂಡಿದ್ದಾರೆ.
“ನಾನು ಮುಂಬೈಗೆ ಮೊದಲ ಬಾರಿಗೆ ಬಂದಾಗ ನಾನು ಹೇಳಿದ್ದೆ, ನಾನು ಇಲ್ಲಿಗೆ ಬಂದಿರುವುದು ಇದು ಒಂದು ದೊಡ್ಡ ಸ್ಟೇಜ್ ಎಂಬ ಕಾರಣಕ್ಕೆ, ನಾನು ನನ್ನ ಹೆತ್ತವರನ್ನು ಈ ಸ್ಟೇಜ್ ಮೂಲಕ ತಲುಪಲು ಇಚ್ಛಿಸುತ್ತೇನೆ. ನನ್ನ ಹೆತ್ತವರು ಬಹಳ ದೂರ ಇರುವ ಕಾರಣ ಕೆಲವೊಮ್ಮೆ ನಾನು ಮೇಲೆ ನೋಡುತ್ತಾ ಅವರನ್ನು ಉದ್ದೇಶಿಸಿ, ಅಪ್ಪ, ಅಮ್ಮ ನಾನು ದೊಡ್ಡ ಸಾಧನೆ ಮಾಡಿದ್ದೇನೆ ಹಾಗೂ ನೀವು ಇದನ್ನೆಲ್ಲಾ ನೋಡಲು ಇಲ್ಲಿ ಇದ್ದರೆ ಚೆನ್ನಾಗಿತ್ತೆಂದು ಭಾವಿಸುವೆ.
ನಾನು ಇದನ್ನು ನನ್ನ ಮನೆಯಂಗಳ ಅಥವಾ ಸ್ಟುಡಿಯೋಗಳಲ್ಲಿ ನಿಂತು ಹೇಳಿದರೆ ಅವರಿಗೆ ನನ್ನ ಮಾತು ಕೇಳದೇ ಹೋಗಬಹುದು. ಆದ್ದರಿಂದ ನಾನು ಹೊರಗೆ ಬಂದು ನಕ್ಷತ್ರಗಳನ್ನು ನೋಡುತ್ತಾ ನನ್ನ ಪಾಲಿನ ತಾರೆಯರಾದ ನನ್ನ ಅಮ್ಮ & ಅಪ್ಪ ನನ್ನತ್ತ ನೋಡಿ ಖುಷಿ ಪಡಬಹುದೆಂದು ಭಾವಿಸುತ್ತೇನೆ” ಎಂದು ಶಾರುಖ್ ತಮ್ಮದೇ ಮಾತುಗಳಲ್ಲಿ ಹೇಳಿದ್ದಾರೆ.
ಶಾರುಖ್ ತಂದೆ ತಾಜ್ ಮೊಹಮ್ಮದ್ ಖಾನ್ ಸುದೀರ್ಘಾವಧಿಯ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ನಿಧನರಾದರೆ, ಅವರ ತಾಯಿ ಲತೀಫ್ ಫಾತಿಮಾ ಖಾನ್ ಸುದೀರ್ಘ ಅನಾರೋಗ್ಯದ ಕಾರಣ 1990ರಲ್ಲಿ ನಿಧನರಾಗಿದ್ದಾರೆ.