ಪರಸ್ಪರ ಬೌಲಿಂಗ್ ಶೈಲಿ ಅನುಕರಣೆ ಮಾಡಿದ ಬೂಮ್ರಾ, ಜಡೇಜಾ – ವಿಡಿಯೋ ವೈರಲ್ 26-11-2020 4:48PM IST / No Comments / Posted In: Latest News, Sports ಟೀಂ ಇಂಡಿಯಾ ಬಲಗೈ ವೇಗಿ ಜಸ್ಪ್ರೀತ್ ಬೂಮ್ರಾ ಎಂದಾದರೂ ಎಡಗೈಲಿ ಆಫ್ ಸ್ಪಿನ್ ಮಾಡೋದನ್ನ ಕಂಡಿದ್ದೀರಾ..? ಬಿಸಿಸಿಐ ಟ್ವಿಟರ್ನಲ್ಲಿ ಶೇರ್ ಮಾಡಿರುವ ವಿಡಿಯೋವೊಂದರಲ್ಲಿ ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್ ಬೂಮ್ರಾ ಒಬ್ಬರಿಗೊಬ್ಬರು ಬೌಲಿಂಗ್ ಶೈಲಿಯನ್ನ ಕಾಪಿ ಮಾಡ್ತಿರೋದನ್ನ ನೋಡಬಹುದಾಗಿದೆ. ಈ ವೇಳೆ ಪೃಥ್ವಿ ಶಾ ಕೂಡ ಇವರಿಬ್ಬರು ಬೌಲರ್ಗಳ ಬೌಲಿಂಗ್ ಶೈಲಿಯನ್ನ ಅನುಕರಣೆ ಮಾಡಿ ತೋರಿಸಿದ್ದಾರೆ. ಬುಮ್ರಾನಂತೆ ಬಲಗೈನಲ್ಲಿ ಬೌಲಿಂಗ್ ಮಾಡಲು ಯತ್ನಿಸಿದ ಜಡೇಜಾ ಬಳಿಕ ಎಡಗೈನಲ್ಲೇ ಬೂಮ್ರಾ ಬೌಲಿಂಗ್ ಶೈಲಿಯನ್ನ ಅನುಕರಣೆ ಮಾಡಿ ತೋರಿಸಿದ್ರು. ಆದರೆ ಬೂಮ್ರಾ ಮಾತ್ರ ಜಡೇಜಾರ ಬೌಲಿಂಗ್ ಶೈಲಿಯನ್ನ ಸಖತ್ ಆಗಿ ಅನುಕರಣೆ ಮಾಡಿ ತೋರಿಸಿದ್ದಾರೆ. ಪೃಥ್ವಿ ಶಾ ಕೂಡ ಬೂಮ್ರಾ ಹಾಗೂ ಜಡೇಜಾ ರೀತಿಯಲ್ಲಿ ಬೌಲಿಂಗ್ ಮಾಡಿ ತೋರಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. Whose bowling actions are @Jaspritbumrah93, @imjadeja and @PrithviShaw imitating? 🤔😀 #TeamIndia pic.twitter.com/JvvPXtgbhv — BCCI (@BCCI) November 25, 2020