ಈ ದಂಪತಿಯ ಅದೃಷ್ಟವೆಂದರೆ ಇದೇ ಇರಬೇಕು ಬೋಟನ್ನು ಮುಳುಗಿದ್ದಾಗ ಜೀವ ರಕ್ಷಿಸಿಕೊಂಡಿದ್ದ ಜೋಡಿಗೆ ಹಲವು ತಿಂಗಳುಗಳ ಬಳಿಕ ಅವರ ವೆಡ್ಡಿಂಗ್ ರಿಂಗ್ ಹುಡುಕಿಕೊಂಡು ಬಂದಿದೆ.
ಸಿರಿಯಾದಿಂದ ಇಟಲಿಗೆ ಪ್ರಯಾಣಿಸುವಾಗ ಬೋಟ್ ಮುಳುಗಿತ್ತು, ಬೋಟ್ ನಲ್ಲಿ ಇದ್ದ 20 ಪ್ರಯಾಣಿಕರ ಪೈಕಿ ಐದು ಮಂದಿ ಜೀವ ಕಳೆದುಕೊಂಡಿದ್ದರು. ಅದೃಷ್ಟವಶಾತ್ ಅಲ್ಜೀರಿಯಾದ ಈ ಜೋಡಿ ಬದುಕುಳಿಯಿತು ಆದರೆ ಅವರ ಬ್ಯಾಕ್ ಪ್ಯಾಕ್ ನೀರಿನಲ್ಲಿ ಮುಳುಗಿತ್ತು. ಆ ಬ್ಯಾಗ್ನಲ್ಲಿ ವೆಡ್ಡಿಂಗ್ ರಿಂಗ್ ಸಹ ಇತ್ತು.
ಅಚ್ಚರಿಯೆಂದರೆ ಕೆಲವು ತಿಂಗಳ ನಂತರ ವಿಪತ್ತು ರಕ್ಷಣಾ ದಳದ ದೋಣಿಗೆ ಸಮುದ್ರದಲ್ಲಿ ಬ್ಯಾಕ್-ಪ್ಯಾಕ್ ಸಿಕ್ಕಿದೆ. ಎರಡು ಶರ್ಟ್, ಬೂಟ್ಸ್, 2 ರಿಂಗ್ ಸಹ ಅದರಲ್ಲಿ ಇದ್ದು, ರಿಂಗ್ ನಲ್ಲಿ ಅಹ್ಮದ್ ಮತ್ತು ಡೌಡೌ ಎಂದು ಕೆತ್ತಲಾಗಿತ್ತು.
ವಿಪತ್ತು ನಿರ್ವಹಣ ಸ್ವಯಂ ಸೇವಾ ಸಂಘದ ಮುಖ್ಯಸ್ಥ ರಿಚರ್ಡ್ ಗಟ್ಟಿ ಅವರು ರಿಂಗಿನ ಬಗ್ಗೆ ಅಭಿಪ್ರಾಯ ತಿಳಿಸಿ, ಅಪಘಾತಕ್ಕೀಡಾದ ಬೋಟ್ ನಲ್ಲಿದ್ದವರದೆ ಈ ಬ್ಯಾಗ್ ಇರಬಹುದೆಂದು ಭಾವಿಸಿದರು. ಬಳಿಕ ಬ್ಯಾಗ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಯಿತು. ಅಹ್ಮದ್ ಅವರನ್ನು ಸಂಪರ್ಕಿಸಿ ಅವರಿಗೆ ತಲುಪಿಸುವ ಕೆಲಸ ನಡೆಯಿತು. ಬ್ಯಾಗ್ ಮತ್ತು ವೆಡ್ಡಿಂಗ್ ರಿಂಗ್ ನೋಡಿ ಅಹಮದ್ ಸಂತೋಷ ಪಟ್ಟು ಭಾವುಕರಾದರು ಎಂದು ತಿಳಿದು ಬಂದಿದೆ.
https://www.facebook.com/openarmsitalia/posts/2881841538702815