ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆಯಲು ಆರ್.ಜೆ.ಡಿ. ವಿಫಲವಾದ ನಂತರ ಆ ಪಕ್ಷದ ಕಾರ್ಯಕರ್ತರು ಸಿಹಿಯನ್ನು ಚರಂಡಿಗೆ ಚೆಲ್ಲಿದ ಫೋಟೋ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆದರೆ, ಅದು ಸುಳ್ಳು ಎಂಬುದು ಫ್ಯಾಕ್ಟ್ ಚೆಕ್ ನಲ್ಲಿ ಕಂಡು ಬಂದಿದೆ.
ಫೋಟೋ ಫೇಸ್ ಬುಕ್ ಹಾಗೂ ಟ್ವಿಟರ್ ನಲ್ಲಿ ನವೆಂಬರ್, 12 ರಂದು ಅಪ್ ಲೋಡ್ ಆಗಿತ್ತು. ಗೂಗಲ್ ನಲ್ಲಿ ಹಾಕಿ ನೋಡಿದಾಗ ಯಾವುದೇ ಅಂಥ ಫೋಟೋ ಇರಲಿಲ್ಲ.
ಹರಿಯಾಣದ ಸಿರ್ಸಾದಲ್ಲಿ ಸಿಹಿ ತಿಂಡಿ ಅಂಗಡಿಯೊಂದರ ಮೇಲೆ ದಾಳಿ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು ಬಳಕೆಗೆ ಯೋಗ್ಯವಲ್ಲದ 100 ಕಿಗ್ರಾಂನಷ್ಟು ರಸಗುಲ್ಲಾ ನಾಶಪಡಿಸಿದ್ದರು. ಅದರ ಸುದ್ದಿ ʼಅಮರ್ ಉಜಾಲಾʼ ಪತ್ರಿಕೆಯಲ್ಲಿ ನ.10 ರಂದು ಪ್ರಕಟವಾಗಿತ್ತು. ಅದನ್ನೇ ಬಿಹಾರ ಫೋಟೋ ಎಂದು ಬಳಸಿಕೊಳ್ಳಲಾಗಿದೆ ಎಂಬುದು ಪತ್ತೆಯಾಗಿದೆ.