ನಿವಾರ್ ಚಂಡ ಮಾರುತದ ಪರಿಣಾಮ ಪುದುಚೆರಿ, ತಮಿಳನಾಡು ಹಾಗೂ ಪೂರ್ವ ಕರಾವಳಿಯ ಇತರ ಭಾಗಗಳಲ್ಲಿ ಸೋಮವಾರ ರಾತ್ರಿಯಿಂದ ಭಾರಿ ಮಳೆ ಪ್ರಾರಂಭವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಚೆನ್ನೈನ ಚಂಬರಂಬಾಕಂ ಸರೋವರದ ಗೇಟ್ ಗಳನ್ನು ಬುಧವಾರ ಮೇಲೆತ್ತಿ 1 ಸಾವಿರ ಕ್ಯೂಸೆಕ್ ನಷ್ಟು ನೀರು ಹೊರ ಬಿಡಲಾಗಿದೆ.
ಇತ್ತೀಚಿನ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಚಂಬರಂಬಾಕಂ ಸರೋವರದ ಗೇಟ್ ಗಳನ್ನು ಬೇಗನೇ ತೆರೆಯಲಾಗಿದೆ. ಸರೋವರದಲ್ಲಿ 24 ಅಡಿ ನೀರು ಸಂಗ್ರಹಿಸುವ ಗರಿಷ್ಠ ಸಾಮರ್ಥ್ಯವಿತ್ತು. ಇತ್ತೀಚೆಗೆ ಪಿಡಬ್ಲ್ಯುಡಿ ಅದರ ಎತ್ತರವನ್ನು ಮತ್ತೆ 22 ಅಡಿ ಹೆಚ್ಚಿಸಿದೆ. ಆದರೆ, ಸರೋವರ ಸಂಪೂರ್ಣ ಪೂರ್ಣವಾಗುವ ಮೊದಲೇ ನಾಗರಿಕರ ಹಾಗೂ ಡ್ಯಾಂ ಸುರಕ್ಷತೆಯ ದೃಷ್ಟಿಯಿಂದ ನೀರನ್ನು ಹೊರಬಿಡಲಾಗಿದೆ.
ಸರೋವರದಲ್ಲಿ ಶೇ.79 ರಷ್ಟು ನೀರು ಸಂಗ್ರಹವಾಗಿದ್ದು, 60 ಸಾವಿರ ಕ್ಯೂಸೆಕ್ ನೀರನ್ನು ಆದ್ಯಾರ್ ನದಿಗೆ ತಿರುಗಿಸಲಾಗಿದೆ. ಗೇಟ್ ತೆರೆದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.