ಸ್ಟಾಕ್ ಹೋಂ: 8400 ವರ್ಷಗಳ ಹಿಂದಿನ ಬೃಹತ್ ಬೇಟೆ ನಾಯಿಯ ಅವಶೇಷಗಳನ್ನು ಕಳೆದ ಸೆಪ್ಟೆಂಬರ್ ನಲ್ಲಿ ಪತ್ತೆ ಮಾಡಲಾಗಿದೆ. ಅವುಗಳನ್ನು ಸ್ವೀಡನ್ ಕರ್ಲಸ್ಕರೊನಾ ಬ್ಲೇಕಿಂಗ್ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿದೆ.
ಸ್ವೀಡನ್ ದೇಶದ ಪುರಾತತ್ವ ಶಾಸ್ತ್ರಜ್ಞರು 2015 ರಿಂದ ಬ್ಲೆಕಿಂಗ್ ಕೌಂಟಿಯ ಲ್ಜುಂಗಾವಿಕೆನ್ ಎಂಬಲ್ಲಿ ಉತ್ಖನನ ನಡೆಸಿದ್ದರು. ಈ ಸಂದರ್ಭದಲ್ಲಿ ಹಲವಾರು ಮೂಳೆಗಳು ಪತ್ತೆಯಾಗಿವೆ. ತೆಳುವಾದ ಬೇಟೆ ನಾಯಿಯ ಎಲುಬುಗಳು ಎಂದು ಇವನ್ನು ಪ್ರಾಣಿ ಅಸ್ತಿ ಶಾಸ್ತ್ರಜ್ಞರು ಗುರುತಿಸಿದ್ದಾರೆ.
ಇದು ಶಿಲಾಯುಗದ ಮಧ್ಯದ ಅವಧಿಯದ್ದಾಗಿದೆ. ಸಮುದ್ರ ಮಟ್ಟ ಹೆಚ್ಚಿ ನಾಯಿಯ ಅಸ್ತಿ ಪಂಜರ ಇದ್ದ ಜಾಗದಲ್ಲಿ ಮಣ್ಣು, ಹೂಳು ತುಂಬಿತ್ತು ಎಂದು ತಜ್ಞರು ಹೇಳಿದ್ದಾರೆ. ವಿಶೇಷ ಎಂದರೆ ಈಗ ಉತ್ಖನನ ಮಾಡಿದ ಜಾಗದಲ್ಲೇ ವಸತಿ ಸಮುಚ್ಛಯ ನಿರ್ಮಾಣ ಮಾಡಲಾಗುತ್ತಿದೆ.