alex Certify ದೀರ್ಘಾಯುಷ್ಯದ ಗುಟ್ಟು ಹೇಳಿದ 100 ವರ್ಷದ ಅಜ್ಜ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀರ್ಘಾಯುಷ್ಯದ ಗುಟ್ಟು ಹೇಳಿದ 100 ವರ್ಷದ ಅಜ್ಜ..!

Know what bizarre things this 100-year-old grandpa claimed as his secret of  longevity… – East Coast Daily Englishಕೆಲ ತಿಂಗಳ ಹಿಂದಷ್ಟೇ 100 ನೇ ವರ್ಷದ ಜನ್ಮ ದಿನಾಚರಣೆ ಆಚರಿಸಿಕೊಂಡ ಚೀನಾದ ಜಿಂಜಿಂಗ್​ ಮೂಲದ ಝಾಂಗ್​ ಕೆಮಿನ್​​ ತಮ್ಮ ಧೂಮಪಾನ , ಮದ್ಯಪಾನ ಹಾಗೂ ತಿನ್ನೋದೇ ತಮ್ಮ ದೀರ್ಘಾಯುಷ್ಯದ ಗುಟ್ಟು ಎಂದಿದ್ದಾರೆ.

ಜೂನ್​ 27 ನೇ ತಾರೀಖಿನಂದು ಕೆಮಿನ್​ ತಮ್ಮ 100ನೇ ವರ್ಷದ ಜನ್ಮ ದಿನಾಚರಣೆ ಆಚರಿಸಿಕೊಂಡ್ರು. ಈ ವೇಳೆ ಖಾಸಗಿ ಮಾಧ್ಯಮದ ಜೊತೆ ತಮ್ಮ ದೀರ್ಘಾಯುಷ್ಯದ ಹಿಂದಿರುವ ಸೀಕ್ರೆಟ್​ನ್ನ ರಿವೀಲ್​ ಮಾಡಿದ್ದಾರೆ.

ಐದು ತಲೆಮಾರುಗಳನ್ನ ನೋಡಿರುವ ಕೆಮಿನ್​​ ಮದ್ಯಪಾನ ಹಾಗೂ ಧೂಮಪಾನ ಎರಡನ್ನೂ ಮಾಡುತ್ತಿದ್ದರಂತೆ. ಆದರೆ ತಮ್ಮ ಮೂವತ್ತನೇ ವಯಸ್ಸಿಗೆ ಮದ್ಯಪಾನವನ್ನ ಕೆಮಿನ್​ ತ್ಯಜಿಸಿದ್ದಾರೆ. ಪ್ರತಿದಿನ ಒಂದು ಪ್ಯಾಕೆಟ್​ ಸಿಗರೆಟ್​ ಖಾಲಿ ಮಾಡುವ ಕೆಮಿನ್​ ಇದೇ ತಮ್ಮ ದೀರ್ಘಾಯುಷ್ಯದ ಗುಟ್ಟು ಎಂದಿದ್ದಾರೆ.
ತಮ್ಮ 20ನೇ ವಯಸ್ಸಿನಿಂದಲೇ ಧೂಮಪಾನ, ಮದ್ಯಪಾನ ಮಾಡಲು ಆರಂಭಿಸಿರುವ ಕೆಮಿನ್​, ದೀರ್ಘಾಯುಷಿಯಾಗಿದ್ದಾರೆ.

ಹೀಗಾಗಿ ಇವೆರಡು ದುಶ್ಚಟ ಎಂದು ಎನಿಸಿಯೇ ಇಲ್ಲ ಎಂದು ಹೇಳಿದ್ರು. ಆದರೆ ಧೂಮಪಾನ ಹಾಗೂ ಮದ್ಯಪಾನ ಎರಡೂ ಜೀವಕ್ಕೆ ಹಾನಿಕರ ಎಂಬ ವಿಚಾರವನ್ನ ನಾವು ಮರೆಯುವಂತಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...