alex Certify ಉಡುಗೊರೆಯಾಗಿ ಪಡೆದಿದ್ದ ಬೆಳ್ಳಿಗದೆಯನ್ನ ವಾಪಸ್ ಮಾಡಿದ ಮಾಲೂರು ಎಸ್ಐ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಡುಗೊರೆಯಾಗಿ ಪಡೆದಿದ್ದ ಬೆಳ್ಳಿಗದೆಯನ್ನ ವಾಪಸ್ ಮಾಡಿದ ಮಾಲೂರು ಎಸ್ಐ.

News18 Kannada - ವಿವಾದದ ಬಳಿಕ ಬೆಳ್ಳಿ ಗದೆ ಉಡುಗೊರೆಯನ್ನು ವಾಪಾಸ್ ನೀಡಿದ ಕೋಲಾರದ ಸಬ್ ಇನ್ಸ್ ಪೆಕ್ಟರ್ | Kolar Sub Inspector returns Silver Gada which as gifted from public - Karnataka Kannada News ...

ಸರ್ಕಾರಿ ಕೆಲಸದಲ್ಲಿರುವವರು ದೊಡ್ಡ ಮೊತ್ತದ ಉಡುಗೊರೆಗಳನ್ನು ಉಚಿತವಾಗಿ ಪಡೆಯಬಾರದು ಎಂಬುದಿದೆ. ಆದರೆ ಈ ಪ್ರಸಂಗಗಳು ನಡೆಯುತ್ತಲೇ ಇದ್ದಾವೆ.

ಇತ್ತೀಚೆಗೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸುದ್ದಿ ಎಂದರೆ ಕೋಲಾರ ಜಿಲ್ಲಾ ಪಂಚಾಯಿತಿ ಸಿಇಓ ಆಗಿದ್ದ ಜಗದೀಶ್ ಉಡುಪಿಗೆ ಜಿಲ್ಲಾಧಿಕಾರಿಯಾಗಿ ಬಡ್ತಿ ಪಡೆದು ವರ್ಗಾವಣೆಯಾಗಿದ್ದರು. ಈ ವೇಳೆ ಕೋಲಾರ ಜಿಲ್ಲೆಯ ಪಿಡಿಓ ಕ್ಷೇಮಾಭಿವೃದ್ಧಿ ಸಂಘ ಅವರಿಗೆ ಬೆಳ್ಳಿಗದೆಯನ್ನು ಉಡುಗೊರೆಯಾಗಿ ನೀಡಿದ್ದರು. ಇದು ವಿವಾದ ಹುಟ್ಟುಹಾಕೋದ್ರ ಜೊತೆಗೆ ಎಸಿಬಿಯವರೆಗೆ ಹೋಗಿತ್ತು. ಈ ಘಟನೆ ಸಂಬಂಧ ಇನ್ನೂ ಎಸಿಬಿಯಲ್ಲಿ ವಿಚಾರಣೆ ನಡೆಯುತ್ತಿದೆ.

ಇದರ ಬೆನ್ನಲ್ಲೇ ಇದೀಗ ಮತ್ತೆ ಇಂತಹದ್ದೇ ಘಟನೆ ನಡದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯಿಂದ ಮಾಲೂರು ಪೊಲೀಸ್ ಠಾಣೆಗೆ ಸಬ್‌ಇನ್ಸ್‌ಪೆಕ್ಟರ್ ಆಗಿ ಅನಿಲ್ ಕುಮಾರ್ ವರ್ಗಾವಣೆಯಾದರು. ಈ ವೇಳೆ ನಂಗಲಿ ಗ್ರಾಮಸ್ಥರು ಇವರಿಗೆ ಬೀಳ್ಕೊಡುಗೆ ನೀಡಿದರು. ಈ ವೇಳೆ ಸಾವಿರಾರು ರೂಪಾಯಿ ಮೌಲ್ಯದ ಬೆಳ್ಳಿಗದೆಯನ್ನ ನೀಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಅಷ್ಟೆ ಅಲ್ಲ ಆರ್ಟಿಐ ಕಾರ್ಯಕರ್ತ ಕೆ.ಸಿ. ರಾಜಣ್ಣ ಈ ಬಗ್ಗೆ ಪ್ರಶ್ನೆ ಮಾಡಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಂಗಲಿ ಗ್ರಾಮದ ಮುಖಂಡರನ್ನ ಮಾಲೂರಿಗೆ ಕರೆಸಿಕೊಂಡ ಸಬ್‌ಇನ್ಸ್‌ಪೆಕ್ಟರ್ ಅನಿಲ್ ಕುಮಾರ್ ಆ ಬೆಳ್ಳಿಗದೆಯನ್ನು ವಾಪಸ್ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...