ಕಪಿಲ್ ಶರ್ಮಾರ ಕಾಮಿಡಿ ಶೋ ಒಂದರಲ್ಲಿ ಭಾಗಿಯಾಗಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ತಮ್ಮ ಪುತ್ರನ ಬಾಲ್ಯದ ದಿನವೊಂದನ್ನು ಸ್ಮರಿಸಿಕೊಂಡಿದ್ದಾರೆ.
ಬಹಳ ವರ್ಷಗಳ ಹಿಂದೆ ತಮ್ಮ ಮನೆಗೆ ಭೇಟಿ ಕೊಡುತ್ತಿದ್ದ ಗಣೇಶ್ ಹೆಸರಿನ ವ್ಯಕ್ತಿಗೆ ಮನೆಯಲ್ಲಿ ಭಾರೀ ಮರ್ಯಾದೆ ಸಿಗುತ್ತಿದ್ದ ವಿಚಾರವನ್ನು ಸಲೀಂ ಹೇಳಿಕೊಂಡಿದ್ದಾರೆ. ಗಣೇಶ್ ಅವರು ಮನೆಗೆ ಬರುತ್ತಲೇ ಅವರಿಗೆಂದೇ ವಿಶೇಷವಾದ ಆಸನ, ಸ್ಪೆಷಲ್ ಚಹಾ ಸೇರಿದಂತೆ ವಿಶೇಷ ಸತ್ಕಾರಗಳನ್ನು ಕೊಡುತ್ತಿದ್ದಿದ್ದಾಗಿ ಸಲೀಂ ಹೇಳಿದ್ದಾರೆ.
ಖುದ್ದು ತಮಗೇ ಇಲ್ಲದ ಈ ರಾಜ ಮರ್ಯಾದೆ ಆತನಿಗೇಕೆ ಎಂದು ತಿಳಿದುಕೊಳ್ಳಲು ಮುಂದಾದ ಸಲೀಂಗೆ ಈ ವಿಚಾರ ತಿಳಿಯಿತಂತೆ: ತಮ್ಮ ಪುತ್ರರಿಗೆ ಗಣೇಶ್ ಪರೀಕ್ಷಾ ಪತ್ರಿಕೆಗಳು ಲೀಕ್ ಆದಾಗ ಅವುಗಳನ್ನು ತಂದು ಕೊಡುತ್ತಿದ್ದರಂತೆ. ಇದೇ ವೇಳೆ ವೇದಿಕೆ ಮೇಲೆ ಅರ್ಬಾಜ್ ಹಾಗೂ ಸೊಹೇಲ್ ಖಾನ್ ಇದ್ದರು.