alex Certify ಕೊರೊನಾ ಎರಡನೇ ಅಲೆ ಕುರಿತು ಡಾ. ರಾಜು ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಎರಡನೇ ಅಲೆ ಕುರಿತು ಡಾ. ರಾಜು ಹೇಳಿದ್ದೇನು…?

ಮಹಾಮಾರಿ ಕೊರೊನಾ ಲಸಿಕೆ ಲಭ್ಯವಾಗುತ್ತಿರುವ ಬೆನ್ನಲ್ಲೇ ಕೊರೊನಾ ಎರಡನೇ ಅಲೆ ಆತಂಕವೂ ಹೆಚ್ಚಿದೆ. ಕೊರೊನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿ, ಹಲವು ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಿ ಧೈರ್ಯ ತುಂಬುತ್ತಿರುವ ಡಾ. ರಾಜು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಕೊರೊನಾ ಎರಡನೇ ಅಲೆ, ಮತ್ತೆ ಲಾಕ್ ಡೌನ್ ಹಾಗೂ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ ಬಗ್ಗೆ ಎದ್ದಿರುವ ಚರ್ಚೆ ಕುರಿತಾಗಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಯಾವುದೇ ಸಾಂಕ್ರಾಮಿಕ ರೋಗ ಅಥವಾ ಕಾಯಿಲೆ ತೀವ್ರ ಹೆಚ್ಚಳವಾಗಿ ಕಡಿಮೆಯಾದ ಬಳಿಕ ಮತ್ತೆ ಹೆಚ್ಚಾದರೆ ಅದನ್ನು ಎರಡನೇ ಅಲೆ ಎಂದು ಹೇಳುತ್ತಾರೆ. ಹಲವು ರಾಷ್ಟ್ರಗಳಲ್ಲಿ ಕೊರೊನಾ ಎರಡನೆ ಅಲೆ ಹೆಚ್ಚಿದ್ದು, ಮತ್ತೆ ಲಾಕ್ ಡೌನ್ ಜಾರಿಯಾಗಿದೆ. ಹಾಗಾಗಿ ನಮ್ಮ ರಾಷ್ಟ್ರದಲ್ಲೂ ಕೂಡ ಕೊರೊನಾ ಎರಡನೇ ಅಲೆ ಆರಂಭವಾಗಿ ಮತ್ತೆ ಲಾಕ್ ಡೌನ್ ಜಾರಿಯಾಗುತ್ತಾ ಎಂಬ ಪ್ರಶ್ನೆ ಕೂಡ ಎದ್ದಿದೆ. ಅಲ್ಲದೇ ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ನಂತಹ ಮತ್ತೊಂದು ಸಾಂಕ್ರಾಮಿಕ ರೋಗ ಹರಡುವ ಬಗ್ಗೆಯೂ ಎಚ್ಚರಿಕೆ ನೀಡಿದೆ. ಹಾಗಾಗಿ ಜನರಲ್ಲಿ ಇನ್ನಷ್ಟು ಆತಂಕ, ಗೊಂದಲಗಳು ಸೃಷ್ಟಿಯಾಗಿವೆ.

ಈ ಹಿನ್ನೆಲೆಯಲ್ಲಿ ಡಾ. ರಾಜು ಅವರ ಈ ವಿಡಿಯೋದಲ್ಲಿ ಎಲ್ಲಾ ಗೊಂದಲಗಳಿಗೆ ಉತ್ತರ ನೀಡುವ ಪ್ರಯತ್ನ ನಡೆದಿದೆ…. ನೀವು ಕೂಡ ಈ ವಿಡಿಯೋ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...