ಕೊರೊನಾ ಮಹಾಮಾರಿಯ ನಡುವೆ ಕಾರ್ಯಕ್ರಮಗಳು, ಟೂರ್ನಿಗಳನ್ನು ನಡೆಸೋದೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದರೆ ಕೊರೊನಾ ಅಟ್ಟಹಾಸದ ನಡುವೆಯೂ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿ ಯಶಸ್ವಿಯಾಗಿದೆ. ಯಾವುದೇ ತೊಂದರೆ ಇಲ್ಲದೆ ಈ ಟೂರ್ನಿ ನಡೆದಿದ್ದು ಬಿಸಿಸಿಎಐಗೆ ದೊಡ್ಡ ಮೊತ್ತದ ಆದಾಯ ತಂದುಕೊಟ್ಟಿದೆ.
ಹೌದು, ಕೊರೊನಾ ನಡುವೆ ಯುಎಇಯಲ್ಲಿ ಟಿ-20 ಟೂರ್ನಿ ಆಯೋಚನೆ ಮಾಡಿದಾಗ ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಅಷ್ಟೆ ಅಲ್ಲ, ಇಂತಹ ಸಮಯದಲ್ಲಿ ಟೂರ್ನಿ ಬೇಕಿತ್ತಾ ಅಂತಲೂ ಹೇಳಿದ್ದರು. ಆದರೆ ಟಿ-20 ಯಶಸ್ವಿಯಾದ ಬೆನ್ನಲ್ಲೇ ಅನುಮಾನ ವ್ಯಕ್ತಪಡಿಸಿದವರೇ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಈ ವರ್ಷದ ಐಪಿಎಲ್‌ನಲ್ಲಿ ಬಿಸಿಸಿಐಗೆ 4 ಸಾವಿರ ಕೋಟಿ ಆದಾಯ ಬಂದಿದೆ. ಈ ವಿಚಾರವನ್ನು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಬಹಿರಂಗಪಡಿಸಿದ್ದಾರೆ. ಟಿವಿಯಲ್ಲಿ ವೀಕ್ಷಣೆ ಮಾಡುವವರ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಏರಿಕೆಯಾಗಿದೆ. ಅಲ್ಲದೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ.35 ರಷ್ಟು ವೆಚ್ಚ ಕಡಿತವಾಗಿದೆ ಎಂದು ಅವರು ಹೇಳಿದ್ದಾರೆ.