ಆಧುನಿಕ ಜಗತ್ತಿನ ಸರ್ವಜ್ಞ ಗೂಗಲ್ ಈಗ ಹೊಸದೊಂದು ಫೀಚರ್ ಸೇರಿಸಿಕೊಂಡಿದೆ. ಬಾಯಲ್ಲಿ ಹೇಳಿದ್ದನ್ನೆಲ್ಲ ಚಾಚು ತಪ್ಪದೇ ಮಾಡುವ ಗೂಗಲ್ ಅಸಿಸ್ಟೆಂಟ್ ನಲ್ಲಿ ಈಗ ಸ್ಮಾರ್ಟ್ ಹೋಂ ಶೆಡ್ಯೂಲ್ ಮಾಡಬಹುದಾದ ಕಮಾಂಡ್ ಕೂಡ ಸೇರಿಸಲಾಗಿದೆ.
ಲೈಟ್ ಸ್ವಿಚ್ ಆನ್, ಆಫ್ ಮಾಡುವಂಥಹ ಫೀಚರ್ ಈ ಮೊದಲೇ ಗೂಗಲ್ ಅಸಿಸ್ಟೆಂಟ್ ನಲ್ಲಿದೆ. ಈಗ ಅದಕ್ಕೆ ಮತ್ತಷ್ಟು ಸೇರಿಸಲಾಗಿದೆ. ನಾವು ಮಾಡಿಸುವ ಕಾರ್ಯಕ್ಕೆ ಸಮಯ ನಿಗದಿ ಮಾಡಬಹುದು. ಉದಾಹರಣೆಗೆ “ಗೂಗಲ್ ಐದು ನಿಮಿಷದ ನಂತರ ಲೈಟ್ ಆಫ್ ಮಾಡು ಎಂದರೆ ಸರಿಯಾಗಿ ಐದು ನಿಮಿಷ ಕಳೆದ ನಂತರ ಗೂಗಲ್ ಲೈಟ್ ಸ್ವಿಚ್ ಆಫ್ ಮಾಡುತ್ತದೆ.
ಸೂರ್ಯೋದಯ, ಸೂರ್ಯಾಸ್ತಕ್ಕೆ ಅನುಗುಣವಾಗಿಯೂ ಇದನ್ನು ಹೊಂದಿಸಬಹುದು. ಉದಾಹರಣೆಗೆ ” ಗೂಗಲ್ ಸೂರ್ಯೋದಯಕ್ಕೆ ಐದು ನಿಮಿಷ ಮುಂಚೆ ಲೈಟ್ ಆನ್ ಮಾಡು”ಎಂದರೆ ಗೂಗಲ್ ಅದನ್ನು ಮಾಡುತ್ತದೆ. ಯಾವುದೇ ಕಮಾಂಡ್ ನ್ನು ಶೆಡ್ಯೂಲ್ ಮಾಡಿದ ನಂತರ ಅದನ್ನು ಗೂಗಲ್ ಪೇಜ್ ಗೆ ಹೋಗಿ ರದ್ದು ಮಾಡಬಹುದು. ಆದರೆ, ಸ್ವಲ್ಪ ಕಷ್ಟ. ಈ ಸೌಲಭ್ಯ ಎಲ್ಲರಿಗೂ ಲಭ್ಯವಾಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.