ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಹಿಮಾಚಲ ಪ್ರದೇಶ ಸರ್ಕಾರ ಶಾಲೆ, ಕಾಲೇಜು ಸೇರಿದಂತೆ ಎಲ್ಲಾ ಶಿಕ್ಷಣ ವಿದ್ಯಾಲಯಗಳನ್ನ ಡಿಸೆಂಬರ್ 31ರವರೆಗೆ ಬಂದ್ ಮಾಡಲು ನಿರ್ಧರಿಸಿದೆ.
ಹಾಗೂ ಚಳಿಗಾಲದಲ್ಲಿ ಬಂದ್ ಆಗಿರುವ ವಿದ್ಯಾಲಯಗಳು ಜನವರಿ 1 ರಿಂದ ಫೆಬ್ರವರಿ 12ರವರೆಗೆ ಬಂದ್ ಇರಲಿದೆ.
ನವೆಂಬರ್ 26ರಿಂದ ಆನ್ಲೈನ್ ತರಗತಿಗಳು ಆರಂಭವಾಗಲಿವೆ. ರಾಜ್ಯ ಸರ್ಕಾರ ವ್ಯಾಪ್ತಿಯ ಎಲ್ಲ ಶಿಕ್ಷಕರಿಗೆ ಮನೆಯಲ್ಲೇ ಇದ್ದು ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ.
ಇದು ಮಾತ್ರವಲ್ಲದೇ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹಿಮಾಚಲ ಪ್ರದೇಶ ಸರ್ಕಾರ ಮಂಡಿ, ಶಿಮ್ಲಾ, ಕುಲ್ಲು ಹಾಗೂ ಕಾಂಗ್ರಾದಲ್ಲಿ ನವೆಂಬರ್ 24ರಿಂದ ಡಿಸೆಂಬರ್ 15ರವರಗೆ ನೈಟ್ ಕರ್ಫ್ಯೂ ವಿಧಿಸಲಾಗಿದೆ.